ವೀರಾಜಪೇಟೆ, ಸೆ. ೧೧: ವೀರಾಜಪೇಟೆ ತಾಲೂಕು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಕಾಡಾನೆಗಳ ದಾಳಿಯನ್ನು ನಿಯಂತ್ರಿಸಬೇಕೆAದು ರಾಜ್ಯ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸುವುದಾಗಿ ಅಮ್ಮತ್ತಿ ರೈತ ಸಂಘದ ಗೌರವ ಅಧ್ಯಕ್ಷ ಕಾವಾಡಿಚಂಡ ಯು. ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ತೀರ್ಮಾನಿ ಸಲಾಯಿತು.
ವೀರಾಜಪೇಟೆ ಸಮೀಪದ ಅಮ್ಮತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಅಮ್ಮತ್ತಿ ರೈತ ಸಂಘದ ೧೧ನೇ ವಾರ್ಷಿಕ ಮಹಾಸಭೆ'ಯಲ್ಲಿ ಮಾತನಾಡಿದ ಅವರು ರೈತರಿಗೆ ೧೦ ಹೆಚ್.ಪಿ. ಮೋಟರ್ಗೆ ಉಚಿತ ವಿದ್ಯುತ್ ನೀಡಲು ಈ ಹಿಂದಿನ ಸರಕಾರ ಕ್ರಮ ಕೈಗೊಂಡಿತ್ತು. ಆದರೆ ಈಗಿನ ಸರಕಾರವು ರೈತರಿಗೆ ಸ್ಪಂದಿಸಿ ಸೆಸ್ಕಾಂ ಇಲಾಖೆಗೆ ಸೂಚನೆ ನೀಡುವಂತೆ ಕೋರಿದ ಕಾವಾಡಿ ಚಂಡ ಯು. ಗಣಪತಿ ಅವರು ಅಮ್ಮತ್ತಿ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಯಲ್ಲಿದ್ದು ಸಂಬAಧ ಪÀಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸುವಂತಾಗಬೇಕು. ಹಾಗೂ ಪೌತಿ ಖಾತೆ ಇನ್ನಿತರ ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು.
ರೈತ ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸಿ. ಸುಬ್ಬಯ್ಯ ಅವರು ಸಭೆಯನ್ನು ಉದ್ದೇಶಿಸಿ ರೈತರು ಸಮಯ ಪಾಲನೆ ಮಾಡಬೇಕು ಹಿರಿಯರು ಮಾಡಿರುವಂತ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ಕೃಷಿಗೆ ಸಂಬAದಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅವರಿಂದ ಸಿಗುವ ಸೌಲಭ್ಯ ಮತ್ತು ಮಾಹಿತಿಯನ್ನು ಪಡೆದುಕೊಂಡು ಆಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಿಕೊಳ್ಳು ವಂತೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರೈತ ಸಂಘದ ಅಧ್ಯಕ್ಷ ಕೆ.ಎಂ.ಕುಶಾಲಪ್ಪ ಸಭೆಯಲ್ಲಿ ಮಾತನಾಡಿದರು.
ಗೌರವ ಕಾರ್ಯದರ್ಶಿ ಎಂ.ಜಿ. ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಪಿ.ಬಿ. ಹರಿ ವಾರ್ಷಿಕ ವರದಿ ವಾಚಿಸಿದರು.
ಮಾಚಿಮಂಡ ಸುರೇಶ್ ಅಯ್ಯಪ್ಪ ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿದ್ದ ನೆಲ್ಲಮಕ್ಕಡ ಶಂಭು ಸೋಮಯ್ಯ, ಪಟ್ಟಡ ನರು ನಂಜಪ್ಪ, ಕೆ.ಪ್ರಶಾಂತ್ ಮಾದಯ್ಯ, ಕೆ.ಪಿ. ಪೂಣಚ್ಚ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.