ಭಾಗಮಂಡಲ, ಸೆ. ೧೧ : ಕಾವೇರಿ ತುಲಾ ಸಂಕ್ರಮಣದ ಸಂದರ್ಭ ಭಾಗಮಂಡಲದಲ್ಲಿ ಅಗತ್ಯ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಹೇಳಿದರು. ಕಾವೇರಿ ತುಲಾಸಂಕ್ರಮಣದ ಪ್ರಯುಕ್ತ ಭಾಗಮಂಡಲ ಗ್ರಾ.ಪಂ.ನಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಮಧ್ಯರಾತ್ರಿ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುವು ದರಿಂದ ಕೊಡಗು ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಜಾತ್ರೆಗೆ ಮುಂಚಿತವಾಗಿ ತಾ. ೧೭ ರಂದು
(ಮೊದಲ ಪುಟದಿಂದ) ಆಟೋ ಚಾಲಕರ ಮತ್ತು ಮಾಲೀಕರ ಸಂಘ ಭಾಗಮಂಡಲ, ಸಂಜೀವಿನಿ ಒಕ್ಕೂಟದೊಂದಿಗೆ ತಲಕಾವೇರಿ ಯಿಂದ ಭಾಗಮಂಡಲ ಚೆದುಕಾರು ಸೇತುವೆವರೆಗೆ ೧೨ ಕಿಲೋಮೀಟರ್ ದೂರ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾವೂರು ಗ್ರಾಮದಿಂದ ಭಾಗಮಂಡಲಪೇಟೆಗಾಗಿ ತಲಕಾವೇರಿಯವರೆಗೆ ಬೀದಿ ದೀಪಗಳ ದುರಸ್ತಿ ಹಾಗೂ ಬೀದಿ ದೀಪಗಳು ಇಲ್ಲದ ಕಡೆ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಲಾಯಿತು. ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಓರ್ವ ಸಿಬ್ಬಂದಿಯನ್ನು ನಿರಂತರವಾಗಿ ಇರಲು ನೇಮಕ ಮಾಡಲು ತೀರ್ಮಾನಿಸಲಾಯಿತು. ಭಾಗಮಂಡಲ ಮುಖ್ಯದ್ವಾರದಿಂದ ಪೇಟೆ ವರೆಗೆ ಕಾಡು ಕಡಿದು ಸ್ವಚ್ಛಗೊಳಿಸುವುದು, ಭಾಗಮಂಡಲದಿAದ ತಲಕಾವೇರಿಗೆ ಸಂಪರ್ಕಿಸುವ ಭೀಮನ ಕಲ್ಲು ಕಾಲು ರಸ್ತೆ ಕಾಡು ಕಡಿಯುವುದು, ಕುಡಿಯುವ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿಯುವುದು ಹಾಗೂ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಕಳಿಸಿಕೊಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ವಚ್ಛತೆಯ ಬಗ್ಗೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅರಿವು ಮೂಡಿಸಲು ಬಿತ್ತಿ ಪತ್ರಗಳನ್ನು ನೀಡುವಂತೆಯೂ ತೀರ್ಮಾನಿಸಲಾಯಿತು. ಜಾತ್ರೆಗೆ ಮುಂಚಿತವಾಗಿ ಪಂಚಾಯಿತಿ ವತಿಯಿಂದ ಕೈಕೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳು ಬಾರದಂತೆ ನಿರ್ವಹಿಸಲು ಸಭೆಯಲ್ಲಿ ನಿರ್ವಹಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಸತೀಶ್ ಕುಮಾರ್, ದಂಡಿನ ಜಯಂತ್, ಶಿರಕಜೆ ನಾಗೇಶ್, ನಿತ್ಯಾನಂದ ದುರ್ಗಾವತಿ, ಶಶಿಕಲಾ, ವೀಣಾ, ಪೂವಮ್ಮ, ಪೆಮಿತಾ ಹಾಗೂ ಪಿಡಿಓ ನಂದ ಉಪಸ್ಥಿತರಿದ್ದರು.
- ಸುನಿಲ್ ಕುಯ್ಯಮುಡಿ