ಪೊನ್ನಂಪೇಟೆ, ಸೆ. ೧೧: ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ. ಚೆನ್ನೆöÊನಲ್ಲಿರುವ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿಯಿಂದ ತಾ. ೯ ರಂದು ತೇರ್ಗಡೆಯಾಗಿ ಲೆಫ್ಟಿನೆಂಟ್ ಪದವಿಯೊಂದಿಗೆ ಹೊರಹೊಮ್ಮಿದ್ದಾರೆ.
ಕೊಳತೋಡು ಬೈಗೋಡು ಗ್ರಾಮದ ತನುಷ್ ಅಪ್ಪಯ್ಯ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿAಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿAಗ್ ಪದವಿ ಪಡೆದಿದ್ದಾರೆ.
ಲೆಫ್ಟಿನೆಂಟ್ ಪದವಿಗೇರಿದ ಮುರುವಂಡ ತನುಷ್ ಅಪ್ಪಯ್ಯ
(ಮೊದಲ ಪುಟದಿಂದ) ಅಲಹಾಬಾದ್ ನಲ್ಲಿ ಎಸ್.ಎಸ್. ಬಿ. ಪೂರ್ಣಗೊಳಿಸಿದ್ದ ತನುಷ್ ಅಪ್ಪಯ್ಯ, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ೮ನೇ ರ್ಯಾಂಕ್ ಪಡೆದು ಚೆನ್ನೆöÊನ ಆಫೀಸರ್ಸ್ ಟ್ರೆöÊನಿಂಗ್ ಅಕಾಡೆಮಿಗೆ ಸೇರಿದ್ದರು.
ತನುಷ್ ಅಪ್ಪಯ್ಯ ಅವರು ಕೊಳತೋಡು ಬೈಗೋಡು ಗ್ರಾಮದ ಮುರುವಂಡ ಎ.ಬೋಪಣ್ಣ (ಮುತ್ತು) ಮತ್ತು ವಿನುತಾ (ತಾಮನೆ: ಬೊಜ್ಜಂಗಡ) ದಂಪತಿಯ ಪುತ್ರ.