ಮಡಿಕೇರಿ, ಸೆ. ೧೦: ಸಂಬಾರ ಉತ್ಪಾದನೆಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಮಗಳ ಬಗ್ಗೆ ರೈತರಿಗೆ ವಿಚಾರ ಸಂಕಿರಣವನ್ನು ಅಪ್ಪಂಗಳದ ಐ.ಸಿ.ಎ.ಆರ್ - ಐ.ಐ.ಎಸ್.ಆರ್ ಪ್ರಾದೇಶಿಕ ಕೇಂದ್ರದಲ್ಲಿ ತಾ.೧೪ ರಂದು ಆಯೋಜಿಸಲಾಗಿದೆ. ಕೊಜಿಕೋಡಿನ ಭಾರತೀಯ ಸಂಬಾರ ಸಂಘದ ವತಿಯಿಂದ ಕಾರ್ಯಕ್ರಮ ಆಯೋ ಜಿಸಲಾಗುತ್ತಿದ್ದು, ಆಸಕ್ತ ರೈತರು (೦೮೨೭೨ ೨೯೮೫೭೪ ಅಥವಾ ೦೮೨೭೨ ೨೦೧೫೭೫) ಸಂಖ್ಯೆಯನ್ನು ಬೆ. ೯ ರಿಂದ ೫.೩೦ ತನಕ ಹಾಗೂ ಇ-ಮೇಲ್ ಮೂಲಕ sಠಿiಛಿes.ಡಿsಚಿ @iಛಿಚಿಡಿ.gov.iಟಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.