ಸುAಟಿಕೊಪ್ಪ, ಸೆ. ೧೦: ಸುಂಟಿ ಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ನಿಗದಿ ಆಂದೋಲನವನ್ನು ಸುಂಟಿಕೊಪ್ಪ ನಾಡಕಚೇರಿ ವತಿಯಿಂದ ನಡೆಯಿತು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್‌ಗೌರಯ್ಯ ಅವರು ಕಂದಾಯ ನಿಗದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮಮಟ್ಟದ ಜನತೆಯು ತಮ್ಮ ಕೃಷಿಭೂಮಿಗಳು ಸೇರಿದಂತೆ ಭೂಮಾಲೀಕರ ಹಕ್ಕುದಾರರು ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ವೆ ವಿಭಾಗದ ಮುಖ್ಯಾಧಿಕಾರಿ ಮಹೇಶ್, ಸುಂಟಿಕೊಪ್ಪ ಉಪ ತಹಶೀಲ್ದಾರ್ ಶಿವಪ್ಪ, ಸರ್ವೆಯರ್‌ಗಳಾದ ಶ್ರೀನಿವಾಸ್, ಸಿದ್ದರಾಜು, ಸಹಾಯಕ ಗುರು, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಜಯಂತ್, ನಸೀಮ, ಗ್ರಾಮ ಸಹಾಯಕ ಶಿವಪ್ಪ ಇತರರು ಹಾಜರಿದ್ದರು.