ಗೋಣಿಕೊಪ್ಪ ವರದಿ, ಸೆ.೧೦: ಬಾಳೆಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು.

ಅಮ್ಮತ್ತಿ, ಹುದಿಕೇರಿ, ಪೊನ್ನಂಪೇಟೆ, ಶ್ರೀಮಂಗಲ, ವೀರಾಜಪೇಟೆ, ಬಾಳೆಲೆ ವಲಯದ ಧ್ವಜ ಅನಾವರಣಗೊಳಿಸಲಾಯಿತು. ಮೂರು ದಿನ ನಡೆಯುವ ಕ್ರೀಡಾಕೂಟದಲ್ಲಿ ಕಬಡ್ಡಿ, ಥ್ರೋಬಾಲ್, ಖೋಖೋ, ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ೩೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ.

ರೂಟ್ಸ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಬ್ಯಾಂಡ್ ಸೆಟ್ ಪ್ರದರ್ಶನ ನೀಡಲಾಯಿತು. ಪ್ರತಿಭಾ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು. ಬಾಳೆಲೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಲೇಜಿಯಂ ನೃತ್ಯದ ಮೂಲಕ ಗಮನ ಸೆಳೆದರು. ಕ್ರೀಡಾಜ್ಯೋತಿಯನ್ನು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಬೆಳಗಿ ಶುಭ ಕೋರಿದರು. ಕ್ರೀಡಾಪಟು ಸಮೀಕ್ಷಾ ಕ್ರೀಡೆ ನಡೆಸಲು ಅನುಮತಿ ಪಡೆದರು.

ಶಾಸಕ ಎ. ಎಸ್. ಪೊನ್ನಣ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿರುವ ಕ್ರೀಡಾಕೂಟದಿಂದ ಹೆಚ್ಚು ಕ್ರೀಡಾಪಟುಗಳು ಹೊರಹೊಮ್ಮಬೇಕಿದೆ ಎಂದರು. ಅಂತರರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಶಾಲಾ ಮಟ್ಟದ ಕ್ರೀಡಾಕೂಟ ಅಂತರರಾಷ್ಟಿçÃಯ ಮಟ್ಟಕ್ಕೂ ನಮ್ಮನ್ನು ಬೆಳೆಸುವ ಮೂಲ ಸ್ಥಾನವಾಗಿರುತ್ತದೆ. ಈ ನಿಟ್ಟಿನಲ್ಲಿ ನಿರ್ಲಕ್ಷö್ಯ ಬಿಟ್ಟು ಆಟದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಜಿ. ಜಾನಕಿ, ಉಪಾಧ್ಯಕ್ಷ ಕೆ. ಪಿ. ಕುಶಾಲಪ್ಪ, ಸದಸ್ಯ ಆದೇಂಗಡ ವಿನು ಉತ್ತಪ್ಪ, ಜಿಲ್ಲಾ ದೈಹಿಕ ಶಿಕ್ಷಕರ ಶಿಕ್ಷಣ ಸಂಘದ ಅಧ್ಯಕ್ಷ ಪಿ. ಎ. ಪ್ರವೀಣ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ. ಆರ್ ಸುಬ್ಬಯ್ಯ, ಉಪಾಧ್ಯಕ್ಷ ಎಂ. ಎಸ್. ತಮ್ಮಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಡಿ. ರಮಾನಂದ, ಮುಖ್ಯ ಶಿಕ್ಷಕಿ ವಸಂತಕುಮಾರಿ, ವಿಜಯಲಕ್ಷಿö್ಮ ಕಾಲೇಜು ಪ್ರಾಂಶುಪಾಲ ಎನ್.ಕೆ. ಪ್ರಭು, ಅನುದಾನಿಕ ಶಾಲಾ ಕಾಲೇಜು ನೌಕರರ ಸಂಘದ ಅಧ್ಯಕ್ಷ ಪ್ರಭುಕುಮಾರ್ ಸೇರಿದಂತೆ ಇತರರಿದ್ದರು. ಅಲೀಮಾ, ಗೀತಾನಾಯ್ಡು ನಿರೂಪಿಸಿದರು.