ಮಡಿಕೇರಿ, ಸೆ. ೧೦: ನಗರದ ಐ.ಟಿ.ಐ ಕಾಲೇಜು ಹಿಂಭಾಗದ ಲ್ಲಿರುವ ಕಿಡ್ಸ್ ಪ್ಯಾರಾಡೈಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಛದ್ಮ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡು ಕಣ್ಮನ ಸೆಳೆದರು. ಈ ಸಂದರ್ಭ ಸಂಸ್ಥೆಯ ಮುಖ್ಯೋ ಪಾಧ್ಯಾಯಿನಿಯಾದ ಬಿಂದು ಹರೀಶ್, ಸಂಚಾಲಕರಾದ ಹರೀಶ್ ಸರಳಾಯ, ಸಿಬ್ಬಂದಿ ವರ್ಗದವರು ಹಾಜರಿದ್ದರು.