ಕರಿಕೆ, ಸೆ. ೧೦: ಮೈಸೂರು- ಮಡಿಕೇರಿ- ಭಾಗಮಂಡಲ-ಕರಿಕೆ ಕಾಸರಗೋಡು-ಮಂಗಳೂರು ಸಂಚರಿಸುವ ಅಂತರ ರಾಜ್ಯ ಸಾರಿಗೆ ಸಂಸ್ಥೆ ಬಸ್ ಭಾಗಮಂಡಲ-ಕರಿಕೆ ರಸ್ತೆಯ ತಣ್ಣಿಮಾನಿ ಗೀತಾಂಜಲಿ ಹೋಂ ಸ್ಟೇ ಬಳಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟುಕೊಡುವ ಸಂದರ್ಭ ರಸ್ತೆ ಬದಿಗೆ ಜಾರಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿ ನಂತರ ತೆರವುಗೊಳಿಸಲಾಯಿತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.