ವೀರಾಜಪೇಟೆ, ಸೆ. ೧೦: ಗೋಣಿ ಕೊಪ್ಪಲು ದಸರಾಗೆ ರೂ.೧ ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಅಧ್ಯಕ್ಷತೆಯಲ್ಲಿ ಭಾನುವಾರ ವೀರಾಜಪೇಟೆ ಯಲ್ಲಿರುವ ಶಾಸಕ ಪೊನ್ನಣ್ಣ ಅವರ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ದಶಮಂಟಪಗಳು ಆರ್ಥಿಕವಾಗಿ ಸಂಕಷ್ಟದಲ್ಲಿ ರುವದರಿಂದ ತಲಾ ರೂ.೫ ಲಕ್ಷ ಕಲ್ಪಿಸಲು ದಶ ಮಂಟಪ ಅಧ್ಯಕ್ಷರ ಮನವಿಯಲ್ಲಿ ತಿಳಿಸಿದ್ದಾರೆ. ಅಜ್ಜಿ ಕುಟ್ಟೀರ ಸಜನ್ ಚಂಗಪ್ಪ, ಜಮ್ಮಡ ಅರಸು, ಮುರುಘ, ಟಿ.ಎನ್. ಗೋವಿಂದಪ್ಪ, ಪರಶುರಾಮ್ ಸೇರಿದಂತೆ ಮೊದಲಾದವರು ತಂಡದ ನಿಯೋಗದಲ್ಲಿದ್ದರು.

ಈ ಸಂದರ್ಭ ಮಾತನಾಡಿದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ರೂ.೧ ಕೋಟಿ ಅನುದಾನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.