ಭಾಗಮಂಡಲ, ಸೆ. ೧೦: ನಕಲಿ ಜೇನು ಮಾರಾಟದ ಆರೋಪಕ್ಕೆ ಗುರಿಯಾಗಿ ವಿವಾದಕ್ಕೆ ಕಾರಣವಾಗಿದ್ದ ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತದ ನೂತನ ಆಡಳಿತ ಮಂಡಳಿಗೆ ಭಾನುವಾರ ಇಲ್ಲಿನ ತರಬೇತಿ ಕೇಂದ್ರದಲ್ಲಿ ಚುನಾವಣೆ ನಡೆದು ಸ್ಪರ್ಧಾ ಕಣದಲ್ಲಿದ್ದ ಬಿಜೆಪಿ ಬೆಂಬಲಿತರು ಎಲ್ಲಾ ಸ್ಥಾನಗಳಲ್ಲಿ ಗೆದ್ದು ವಿಜಯಪತಾಕೆ ಹಾರಿಸಿದರು.

ಸೋಮವಾರಪೇಟೆ ವಿಭಾಗ Àದಿಂದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರಗ ದಿನೇಶ್, ಕೆ.ಕೆ. ಗೋಪಾಲ್, ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಕೆ ಸೌಮ್ಯ, ಪರಿಶಿಷ್ಟ ಜಾತಿ ಮೀಸಲಿನಿಂದ ಸ್ಪರ್ಧಿಸಿದ್ದ ಜಯಂತ್ ತಲಕಾವೇರಿ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರಪೇಟೆ ತಾಲೂಕಿ ನಿಂದ ಹಿಂದುಳಿದ ವರ್ಗ ಮೀಸಲಿನಿಂದ ಸ್ಪರ್ಧೆ ಬಯಸಿದ್ದ ಬೋಪಣ್ಣ (೮೨ ಮತ) ಪ್ರತಿಸ್ಪರ್ಧಿ ಉದಯಕುಮಾರ್ ಅವರನ್ನು (೪೬ ಮತ) ಸೋಲಿಸಿದರು.