ಮಡಿಕೇರಿ, ಸೆ. ೧೦: ಒಂದೆಡೆ ಮೊಸರು ಕುಡಿಕೆ ಒಡೆಯಲು ಹಾತೊರೆಯುವ ಸ್ಪರ್ಧೆಗಳು. ಮತ್ತೊಂದೆಡೆ ಸ್ಪರ್ಧಿಗಳ ಮೇಲೆ ಹತ್ತಿಪ್ಪತ್ತು ಯುವಕರ ತಂಡದಿAದ ನೀರಿನ ಪ್ರಹಾರ, ಸ್ಪರ್ಧಿಗಳ ಪರದಾಟ...

ಇದು ನಗರದ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಲಾಗಿದ್ದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣ. ತುಂತುರು ಮಳೆಯ ನಡುವೆ ನಡೆದ ಈ ಸ್ಪರ್ಧೆ ನೆರೆದಿದ್ದವರನ್ನು ರಂಜಿಸಿತು. ವಿಶೇಷ ಪೂಜೆಯ ಬಳಿಕ ಆರಂಭಗೊAಡ ಸ್ಪರ್ಧೆಯಲ್ಲಿ ಮೊಸರು ಕುಡಿಕೆ ಒಡೆಯಲು ಸಂತೋಷ್ ಹಾಗೂ ಮಹೇಶ್ ಎಂಬವರುಗಳ ತಯಾರಾದರು. ಇಬ್ಬರ ಪೈಕಿ ಒಬ್ಬರ ನಂತರ ಒಬ್ಬರಂತೆ ಮೊಸರು ಕುಡಿಕೆ ಒಡೆಯಲು ಮುಂದಾದರು. ಯುವಕರು ಮಾಡುತ್ತಿದ್ದ ನಿರಂತರ ನೀರಿನ ಪ್ರಹಾರದ ನಡುವೆ ಛಲ ಬಿಡದ ಇಬ್ಬರು ಸ್ಪರ್ಧಿಗಳು ಮೊಸರು ಕುಡಿಕೆಯನ್ನು ಒಡೆದುರುಳಿ ಸಿದರು. ನಂತರ ಸ್ಥಳೀಯರು, ದೇವಾಲಯ ಸಮಿತಿ ಪ್ರಮುಖರು, ಸ್ಪರ್ಧಿಗಳೊಂದಿಗೆ ವಾದಗೋಷ್ಠಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.