ಕುಶಾಲನಗರ, ಸೆ.೧೦: ಕರ್ನಾಟಕ ರಾಜ್ಯದ ವೈವಿಧ್ಯತೆ ಮತ್ತು ಏಕತೆ ಗಮನಿಸಿದಲ್ಲಿ ಮಿನಿ ಭಾರತದಂತೆ ಭಾಸವಾಗುತ್ತಿದೆ ಎಂದು ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದ ಕಲಾಭವನದಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮಾತನಾಡುವ ಕ್ಷೇತ್ರಗಳ ಏಕೀಕರಣ ಗತವೈಭವವನ್ನು ಮರುಕಳಿಸುವಂತೆ ಮಾಡುವುದು ಹಿರಿಯರ ಚಿಂತನೆಯಾಗಿತ್ತು ಎಂದು ಹೇಳಿದ ಅವರು, ಕನ್ನಡ ಕಲೆ, ಸಂಸ್ಕೃತಿ ಬೆಳಗುವಂತೆ ಮಾಡಿ ಅದಕ್ಕೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಲವು ರೀತಿಯಲ್ಲಿ ಕಾರ್ಯ ಯೋಜನೆ ರೂಪಿಸಿದ್ದರು. ಪುಸ್ತಕಗಳು, ಕಲೆಗಳು, ನಾಟ್ಯ ನೃತ್ಯ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದ ಹೆಗ್ಗಳಿಕೆ ಅವರದ್ದಾಗಿದೆ ಎಂದು ಸ್ಮರಿಸಿದರು.

ನಾಲ್ವಡಿ ಒಡೆಯರ್ ಅವರು ದೇವಾಲಯಗಳ ರಕ್ಷಣೆ, ಸಂಘ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ನೀಡಿದ್ದರು. ದೂರದೃಷ್ಟಿಯ ಕಲ್ಪನೆಯ ಮೂಲಕ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ರಾಜ್ಯದಲ್ಲಿ ಹಲವಾರು ಸಂಸ್ಥೆಗಳು ಶತಮಾನೋ ಹಿರಿಯರ ಚಿಂತನೆಯಾಗಿತ್ತು ಎಂದು ಹೇಳಿದ ಅವರು, ಕನ್ನಡ ಕಲೆ, ಸಂಸ್ಕೃತಿ ಬೆಳಗುವಂತೆ ಮಾಡಿ ಅದಕ್ಕೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಲವು ರೀತಿಯಲ್ಲಿ ಕಾರ್ಯ ಯೋಜನೆ ರೂಪಿಸಿದ್ದರು. ಪುಸ್ತಕಗಳು, ಕಲೆಗಳು, ನಾಟ್ಯ ನೃತ್ಯ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದ ಹೆಗ್ಗಳಿಕೆ ಅವರದ್ದಾಗಿದೆ ಎಂದು ಸ್ಮರಿಸಿದರು.

ನಾಲ್ವಡಿ ಒಡೆಯರ್ ಅವರು ದೇವಾಲಯಗಳ ರಕ್ಷಣೆ, ಸಂಘ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ನೀಡಿದ್ದರು.