ವೀರಾಜಪೇಟೆ, ಸೆ. ೧೦: ವಿದ್ಯುತ್ ತಂತಿಗೆ ಅಲ್ಯು ಮಿನಿಯಂ ಏಣಿ ತಗುಲಿದ ಪರಿ ಣಾಮ ಚೆಸ್ಕಾಂ ಸಿಬ್ಬಂದಿ ಮೃತಪಟ್ಟ ಘಟನೆ ವೀರಾಜಪೇಟೆ ಸಮೀಪದ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮಾರ್ನಾಳ್ ನಿವಾಸಿ ಅಪ್ಪಣ ಎಂಬವರ ಪುತ್ರ ಚೆಸ್ಕಾಂ ಲೈನ್ಮ್ಯಾನ್ ಬಸವರಾಜ ತಗ್ಗಿ (೨೯) ಮೃತ ದುರ್ದೈವಿ. ವಿದ್ಯುತ್ ಪ್ರಸರಣದಲ್ಲಿ ಸಮಸ್ಯೆ ದೂರು ಬಂದ ಹಿನ್ನೆಲೆಯಲ್ಲಿ ದುರಸ್ತಿಗೆಂದು ತೆರಳಿದ ವೇಳೆ ಘಟನೆ ಸಂಭವಿಸಿದೆ.
ತಾ. ೧೦ ರಂದು ಬೆಳಿಗ್ಗೆ ಕುಟ್ಟಂದಿ ಗ್ರಾಮದ ಲೈನ್ಮನೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಕಛೇರಿಗೆ ದೂರು ಬಂದ ಹಿನ್ನೆಲೆಯಲ್ಲಿ ಬಸವರಾಜ ಅವರು ದುರಸ್ತಿ ಮಾಡುವ ಸಲುವಾಗಿ ಒಬ್ಬರೆ ಸ್ಥಳಕ್ಕೆ ತೆರಳಿದ್ದರು.