ಮಡಿಕೇರಿ, ಸೆ. ೧೦: ಮಡಿಕೇರಿ ಮಹದೇವಪೇಟೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯ ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ಪ್ರಪ್ರಥಮ ಸಭೆಯು ಸಮಿತಿಯ ಅಧ್ಯಕ್ಷ ಎಂ.ಎ. ಸಾದುಸಾದಿಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಬಡಾವಣೆಯ ಸಂಪೂರ್ಣ ಅಭಿವೃದ್ಧಿ, ಏಕಮುಖಿ ಸಂಚಾರ, ಬೀದಿ ದೀಪದ ಸುವ್ಯವಸ್ಥೆ, ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ, ಪಾರ್ಕ್ ನವೀಕರಣ, ಬೀದಿ ನಾಯಿಗಳ ಹಾವಳಿಗೆ ಮುಕ್ತಿ ಹಾಗೂ ರಸ್ತೆ ದುರಸ್ತಿ ಕಾರ್ಯಗಳ ಕುರಿತು ಈ ವಿಭಾಗದ ಜನಪ್ರತಿನಿಧಿಗಳ ಮೂಲಕ ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಬೇಡಿಕೆ ಈಡೇರಿಸಿಕೊಳ್ಳುವಂತೆ ತೀರ್ಮಾನಿಸಲಾಯಿತು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಸಮಿತಿಯ ಪದಾಧಿಕಾರಿ ಟೈಲರ್ ಭಾಷಾರವರಿಗೆ ಸಂತಾಪವನ್ನು ಸೂಚಿಸಲಾಯಿತು.
ಪದಾಧಿಕಾರಿಗಳಾದ ಎಂ.ಎ. ನಾಸಿರ್, ಎಂ.ಎ. ನಜೀರ್, ಟಿ.ಆರ್. ಜೀವನ್, ಎಂ.ಬಿ. ಕೌಸರ್, ಜಾಲಿ ಮಂದಣ್ಣ, ಪಿ.ವೈ. ಜಕ್ರಿಯಾ, ಪರವಂಡ ಉಸ್ಮಾನ್, ಜಿಯಾವುಲ್ಲಾ ರವರು ಸಭೆಯಲ್ಲಿ ಮಾತನಾಡಿ, ಉಪಯುಕ್ತ ಸಲಹೆ ನೀಡಿದರು. ಇತ್ತೀಚೆಗೆ ವಿದೇಶಿ ಯಾತ್ರೆ ಕೈಗೊಂಡು ಮರಳಿದ ಸಮಿತಿಯ ಅಧ್ಯಕ್ಷ ಎಂ.ಎ. ಸಾದುಸಾದಿಕ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಬೈ. ಶ್ರೀ ಪ್ರಕಾಶ್ ಸ್ವಾಗತಿಸಿ, ಠರಾವು ಮಂಡಿಸಿದರು. ಹಿರಿಯ ಉಪಾಧ್ಯಕ್ಷ ಟಿ.ಆರ್. ಜೀವನ್ ಸ್ವಾಗತಿಸಿದರು.