ನಾಪೋಕ್ಲು, ಸೆ. ೧೦: ಕ್ರೆöÊಸ್ತರ ಪವಿತ್ರ ಹಬ್ಬವಾದ ಕನ್ಯಾ ಮೇರಿ ಮಾತೆ ಜನ್ಮದಿನವನ್ನು ಭಾನುವಾರ ಇಲ್ಲಿಯ ಮೇರಿ ಮಾತೆ ದೇವಾಲ ಯದಲ್ಲಿ ಕ್ರೆöÊಸ್ತ ಬಾಂಧವರು ಸಡಗರ ಸಂಭ್ರಮದಿAದ ಆಚರಿಸಿದರು.

ಮಾತೆ ಮರಿಯಮ್ಮನವರ ಜಯಂತಿಯ ಪ್ರಯುಕ್ತ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರ ವೇರಿಸಿ ದಿನದ ಮಹತ್ವದ ಬಗ್ಗೆ ಮಾತ ನಾಡುತ್ತಾ ಮೇರಿ ಮಾತೆಯ ಆದರ್ಶ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಂತೃಪ್ತ ಜೀವನ ನಡೆಸಬೇ ಕೆಂದು ಹಿತವಚನವನ್ನು ನುಡಿದರು.

ಕ್ರೆöÊಸ್ತ ಬಾಂಧವರು ದೇವಾ ಲಯದಲ್ಲಿ ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿ ತಾವು ತಂದ ಹೂಗ ಳನ್ನು ದೇವಾಲಯದ ಆವರಣದಲ್ಲಿ ವಿಶೇಷವಾಗಿ ಅಲಂಕರಿಸಿ ಇರಿಸ ಲಾದ ಮರಿಯಮ್ಮನವರ ಪ್ರತಿರೂಪಕ್ಕೆ ಸಮರ್ಪಿಸಿದರು. ಈ ಹಬ್ಬಕ್ಕೆ ಪೂರ್ವತಯಾರಿಯಾಗಿ ಒಂಬತ್ತು ದಿನಗಳ ನೋವೇನಾ ಪ್ರಾರ್ಥನೆ ಆಯೋಜಿಸಲಾಗಿತ್ತು. ಈ ಸಂದರ್ಭ ಮೇರಿ ಮಾತೆ ದೇವಾಲಯದ ವ್ಯಾಪ್ತಿಯ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಆಚರಿಸಿದರು.