ಕಡಂಗ, ಸೆ. ೯: ಆಗಸ್ಟ್ ೩೦ ರಿಂದ ಸೆಪ್ಟೆಂಬರ್ ೧ರವರಿಗೆ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಚೆರಂಬಾಣೆ ಅರುಣ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿರುತ್ತಾರೆ.
ಬಾಲಕರ ಹಾಕಿ, ಖೋ ಖೋ, ಬಾಲಕಿಯರ ವಾಲಿಬಾಲ್, ಕಬಡ್ಡಿ, ಖೋ ಖೋ, ಪ್ರಥಮ ಸ್ಥಾನ ಪಡೆದಿದೆ.
ಮೇಲಾಟದಲ್ಲಿ ಎತ್ತರ ಜಿಗಿತ ಪ್ರಥಮ, ೨೦೦ ಮೀ. ಓಟದಲ್ಲಿ ೩ನೇ ಸ್ಥಾನ ಡೀನ ಎನ್. ಎ ೩೦೦೦ ಮೀ. ೩ನೇ ಸ್ಥಾನ, ವನಿತಾ ಡಿ. ೧೦೦ & ೪೦೦ಮೀ ಪ್ರಥಮ ಸ್ಥಾನ, ಭಾರದ ಕಲ್ಲು ಎಸೆತ ೨ನೇ ಸ್ಥಾನ, ಮೋನಿಷಾ ಕೆ.ಎ. ಡಿಸ್ಕಸ್ & ೨೦೦ ಮೀ. ಪ್ರಥಮ ಸ್ಥಾನ, ೧೦೦ ಮೀ. ೩ನೇ ಸ್ಥಾನ, ಧನುಷ್ ಎತ್ತರ ಜಿಗಿತ ಪ್ರಥಮ, ಮೊನಿತ್ ೧೦೦ ಮೀ. ೩ನೇ ಸ್ಥಾನ, ಸುಮಿತ್ ಜಿ ೮೦೦ ಮೀ. ೩ನೇ ಸ್ಥಾನ, ತನುಶ್ರೀ ಟ್ರಿಪ್ಪಲ್ ಜಂಪ್ & ದೂರ ಜಿಗಿತ ೩ನೇ ಸ್ಥಾನ, ಪುನೀತ್ ಟ್ರಿಪ್ಪಲ್ ಜಂಪ್ ೩ನೇ ಸ್ಥಾನ, ಅನಿಲ್ ೧೫೦೦ಮೀ ಓಟದಲ್ಲಿ ೨ನೇ ಸ್ಥಾನ ರಾಜೇಶ್ ಟ್ರಿಪ್ಪಲ್ ಜಂಪ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.