ಗೋಣಿಕೊಪ್ಪಲು, ಸೆ. ೯: ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೪೫,೬೩,೬೯೧ ಲಕ್ಷ ಲಾಭಾಂಶದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಪ್ರಸ್ತುತ ೧೭.೫ ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ ಸದಸ್ಯರ ಹಲವು ಹತ್ತಾರು ಬೇಡಿಕೆಗ ಳನ್ನು ಈಡೇರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ ತಿಳಿಸಿದರು.
ಬಾಳೆಲೆ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ೬೧ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್. ಗಣಪತಿ ಸಂಘದಲ್ಲಿ ಗ್ರಾಮೀಣ ಭಾಗದ ೧೬೮೮ ಸದಸ್ಯರಿದ್ದು, ಸದಸ್ಯರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ವಿತರಿಸಿದ್ದೇವೆ. ಸಂಘದ ಸದಸ್ಯರ ಹಿತ ಕಾಪಾಡುವುದು ಸಂಘದ ಮೂಲ ಉದ್ದೇಶವಾಗಿದೆ. ಈಗಾಗಲೇ ಪೊನ್ನಪ್ಪಸಂತೆಯಲ್ಲಿ ನೂತನ ಶಾಖೆ ಆರಂಭಿಸಿ ಸಂಘದ ಸದಸ್ಯರಿಗೆ ಗೊಬ್ಬರ ವಿತರಣೆ ಹಾಗೂ ಸಂಘದಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿದ್ದೇವೆ.
ಮುಂದಿನ ದಿನದಲ್ಲಿ ಸಂಘದ ಸದಸ್ಯರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಟ್ಟೂರು ಹಾಗೂ ಕೊಟ್ಟಗೇರಿ ಭಾಗದಲ್ಲಿ ನೂತನ ಶಾಖೆಗಳನ್ನು ತೆರೆಯಲಾಗುವುದು ಆ ಮೂಲಕ ಸಂಘದ ಸದಸ್ಯರಿಗೆ ರಸಗೊಬ್ಬರ ವಿತರಣೆ ಹಾಗೂ ಸಂಘದ ಆರ್ಥಿಕ ಚಟುವಟಿಕೆಯನ್ನು ಸ್ಥಳೀಯ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಸಂಘದ ಸದಸ್ಯರ ಪೂರ್ಣ ಸಹಕಾರ ಬೇಕೆಂದು ಕೋರಿದರು.
ಸರ್ಕಾರದ ಹೊಸ ನಿಯಮ ದಂತೆ ಪ್ರಸ್ತುತವಿರುವ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ನಡೆಯುತ್ತಿತ್ತು. ಮುಂದಿನ ವರ್ಷದಲ್ಲಿ ನೂತನ ಬೈಲಾದಂತೆ ಸರ್ಕಾರದ ಸುತ್ತೋಲೆಯ ಅನ್ವಯ ಸಂಘದ ಹೆಸರನ್ನು ಬಾಳೆಲೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಎಂಬ ಹೊಸ ಪದನಾಮ ದೊಂದಿಗೆ ಕಾರ್ಯಚಟುವಟಿಕೆಗಳು ಮುಂದುವರೆಯುತ್ತವೆ. ಇದು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ನಿಯಮವಾಗಿದೆ ಎಂದರು.
ರಾಜ್ಯ ಸರ್ಕಾರದ ಸಹಕಾರ ಸಚಿವರನ್ನು ಭೇಟಿ ಮಾಡಿ ಇಲ್ಲಿನ ಸದಸ್ಯರಿಗೆ ಸಾಲ ಮನ್ನಾ ಯೋಜನೆಯಲ್ಲಿ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಕೃಷಿ ಸಾಲ ಮನ್ನಾದಲ್ಲಿ ನಮ್ಮ ಸಂಘಕ್ಕೆ ಇನ್ನೂ ಕೂಡ ೧೦ ಲಕ್ಷ ಅನುದಾನವು ಬರಲು ಬಾಕಿ ಇದೆ. ಈ ಬಗ್ಗೆ ಮುತುವರ್ಜಿ ವಹಿಸಿ ಸಚಿವರ ಗಮನ ಸೆಳೆಯಲಾಗುವುದು. ಸಂಘಕ್ಕೆ ಸಿಬ್ಬಂದಿಗಳ ನೇಮಕಾ ತಿಯೂ ಕೂಡ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿಯೂ ೨ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಗಾಗಿ ಮನವಿ ಸಲ್ಲಿಸಲಾಗುವುದು ಎಂದರು.
ಸಂಘದಲ್ಲಿ ಪಾರದರ್ಶಕ ತೆಯನ್ನು ಕಾಪಾಡಿಕೊಂಡಿದ್ದು ಇದರಿಂದಾಗಿ ಪ್ರಸ್ತುತ ಸಂಘವು ೪೫,೬೩,೬೯೧ ಲಕ್ಷ ಲಾಭ ಗಳಿಸಿದೆ. ರೈತರಿಗೆ ಇನ್ನಷ್ಟು ಪ್ರಯೋಜನಕಾರಿ ಕೆಲಸ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಸಂಘದ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಸ್ತುತ ಸಾಲಿನಲ್ಲಿ ಸಂಘವು ಹೆಚ್ಚಿನ ಲಾಭ ಗಳಿಸಿದ್ದು ಎ ಗ್ರೇಡ್ನಲ್ಲಿ ಮುಂದುವರೆದಿದೆ. ಕಳೆದ ಸಾಲಿನಲ್ಲಿ ೧೨೫೮ಟನ್ ರಸ ಗೊಬ್ಬರವನ್ನು ರೈತರ ಬೇಡಿಕೆಯಂತೆ ವಿತರಿಸಿದ್ದೇವೆ. ಸದಸ್ಯರ ಅನುಕೂಲಕ್ಕಾಗಿ ಶೇ.೯ರ ಬಡ್ಡಿ ದರದಲ್ಲಿ ಗೊಬ್ಬರವನ್ನು ಸಾಲವಾಗಿ ವಿತರಿಸಿದ್ದರಿಂದ ಸದಸ್ಯರು ಇದರ ಪ್ರಯೋಜನ ಪಡೆದಿದ್ದಾರೆ. ಮುಂದೆಯೂ ನಮ್ಮ ಸಂಘದಿAದಲೇ ರಸಗೊಬ್ಬರವನ್ನು ಖರೀದಿಸಿ ಸಂಘದ ಏಳಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆÀ ಮಾಚಂಗಡ ಆರ್. ಗಾಯತ್ರಿ, ನಿರ್ದೇಶಕರಾದ ಆದೇಂಗಡ ಕೆ.ಚಂದ್ರಶೇಖರ್, ಪೋಡಮಾಡ ಜ್ಯೋತಿ, ನಾಚಪ್ಪ, ಕಾಂಡೇರ ಎಂ.ತೇಜ, ಮಾಚಂಗಡ ಎಂ.ಮುತ್ತಣ್ಣ, ಕಳ್ಳಿಚಂಡ ಬಿ.ಚಿತ್ರ, ಅಡ್ಡೆಂಗಡ ಆರ್. ಗೀತ, ಟಿ.ಕೆ.ಚಂದ್ರ, ಕೆ.ಆರ್. ಗಜಾನನ, ಹೆಚ್.ಹೆಚ್. ಗಣೇಶ್, ಲಲಿತ, ಹೆಚ್.ಎಂ. ಬಸವರಾಜು, ಡಿಸಿಸಿ ಬ್ಯಾಂಕ್ನ ಕೆ.ಬಿ. ದೇವಯ್ಯ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಹಿರಿಯ ಸದಸ್ಯರಾದ ಅಳಮೇಂಗಡ ಬೋಸ್, ಆದೇಂಗಡ ವಿನು ಚಂಗಪ್ಪ ಆದೇಂಗಡ ಅಶೋಕ್, ಮಾಚಂಗಡ ಸುಜಾ ಪೂಣಚ್ಚ, ಮಚ್ಚಮಾಡ ಮಾಚಯ್ಯ, ಅಳಮೇಂಗಡ ರವಿ, ಚೆಕ್ಕೆರ ಮಾದಪ್ಪ, ಮಲ್ಚೀರ ನಾಣಯ್ಯ, ಪೋಡಮಾಡ ಸುಖೇಶ್ ಭೀಮಯ್ಯ, ಮುಕ್ಕಾಟೀರ ವಾಸು ಕಾವೇರಪ್ಪ ಸೇರಿದಂತೆ ಹಲವು ಸದಸ್ಯರು ಉಪಯುಕ್ತ ಸಲಹೆಗಳನ್ನು ನೀಡಿ ದರು. ಸಭೆಯಲ್ಲಿ ಅರಮಣಮಾಡ ರಂಜನ್ ಚಂಗಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ಚೆಕ್ಕೆರ ಸೂರ್ಯ ಅಯ್ಯಪ್ಪ, ಆದೆಂಗಡ ನಳ, ಕಾಡ್ಯಮಾಡ ಉದಯ, ಅರಮಣಮಾಡ ಸುಗುಣ ಗಣಪತಿ, ಸುರೇಶ್ ಸುಬ್ಬಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಮಾಚಂಗಡ ಆರ್. ಗಾಯತ್ರಿ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.