ಮಡಿಕೇರಿ, ಸೆ. ೯: ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಿಂದ ನಾಪತ್ತೆಯಾಗಿದ್ದ ಮಹಿಳೆಯ ವಸ್ತುಗಳು ನಗರದ ಹೊರವಲಯದ ಅಬ್ಬಿಜಲಪಾತ ಬಳಿ ಪತ್ತೆಯಾದ ಹಿನ್ನೆಲೆ ನೀರಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಆದರೆ, ಮಹಿಳೆಯ ಮಾಹಿತಿ ಮಾತ್ರ ಪತ್ತೆಯಾಗಿಲ್ಲ. ತಾ. ೫ ರಂದು ಬಾರಸೆ ಗ್ರಾಮದ ತನ್ನ ಮನೆಯಿಂದ ಯಾರಿಗೂ ಹೇಳದೆ ಬಂದಿದ್ದ ಸರಸ್ವತಿ (೩೩) ಅವರಿಗೆ ಸೇರಿದ ದಾಖಲೆ ಜೊತೆಗೆ ‘ಡೆತ್ನೋಟ್’ ಅಬ್ಬಿ ಜಲಪಾತ ಬಳಿ ತಾ. ೮ ರಂದು ಪತ್ತೆಯಾಗಿತ್ತು.
ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಶಂಕಿಸಿ ಗ್ರಾಮಾಂತರ ಪೊಲೀಸರು, ಎನ್.ಡಿ.ಆರ್.ಎಫ್. ಹಾಗೂ ಅಗ್ನಿಶಾಮಕ ದಳ ಜಲಪಾತ ದಲ್ಲಿ ಕಾರ್ಯಾಚರಣೆ ಕೈಗೆತಿ ್ತಕೊಂಡಿತ್ತು. ಮುಳುಗು ತಜ್ಞರು ನೀರಿನ ಲ್ಲಿಳಿದು ಹುಡುಕಾಟವನ್ನೂ ನಡೆಸಿದ್ದಾರೆ. ಆದರೆ, ಮಹಿಳೆಯ ಗುರುತು ಪತ್ತೆ ಯಾಗಿಲ್ಲ. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಕೈಬಿಡಲಾಗಿದೆ.
ನಾಪತ್ತೆಯಾಗಿದ್ದ ಮಹಿಳೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿರುವುದರಿಂದ ‘ನೆಟ್ವರ್ಕ್ ಟ್ರೇಸಿಂಗ್’ ಕೂಡ ಸಾಧ್ಯವಾಗುತ್ತಿಲ್ಲ. ತಾ. ೧೦ ರಂದು (ಇಂದು) ಕೂಡ ಕಾರ್ಯಾಚರಣೆ ಮುಂದುವರೆಯಲಿದೆ.