ಸೋಮವಾರಪೇಟೆ, ಸೆ. ೯: ತಾಲೂಕಿನ ಗೌಡಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ ವತಿಯಿಂದ ನೂತನವಾಗಿ ೧.೦೬ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲು ಉದ್ದೇಶಿಸಲಾಗಿರುವ ಕಟ್ಟಡ ಕಾಮಗಾರಿಗೆ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್ ಭೂಮಿ ಪೂಜೆ ನೆರವೇರಿ ಸಿದರು. ನಂತರ ಅವರು ಮಾತನಾಡಿ, ಸಹಕಾರ ಸಂಘದ ವ್ಯಾಪ್ತಿಯ ರೈತರ ಸರ್ವತೋಮುಖ ಅಭಿವೃದ್ಧಿಗೆ ಸಂಘ ಶ್ರಮಿಸುತ್ತಿದೆ. ೨,೪೯೪ ಸದಸ್ಯರಿರುವ ಸಂಘ ಪ್ರತಿ ವರ್ಷ ಲಾಭ ಗಳಿಸು ತ್ತಿದ್ದು, ಕಳೆದ ಸಾಲಿನಲ್ಲಿ ಶೇ.೨೫ ಲಾಭಾಂಶ ವಿತರಿಸಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್ನಿAದ ಉತ್ತಮ ಕಾರ್ಯನಿರ್ವಹಣೆಗಾಗಿ ಗೌಡಳ್ಳಿ ಸಂಘಕ್ಕೆ ಮೂರು ಬಾರಿ ದ್ವಿತೀಯ ಬಹುಮಾನ ದೊರೆತಿದೆ ಎಂದು ಹೇಳಿದರು.
ಕಳೆದ ಮಹಾಸಭೆಯಲ್ಲಿ ಸಂಘದ ಸದಸ್ಯರು ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದ ಹಿನ್ನೆಲೆ ಪ್ರಸಕ್ತ ವರ್ಷವೇ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಸಂಘದ ಮೂರು ಎಕರೆ ಜಾಗದಲ್ಲಿ ಹೊಸ ದಾಗಿ ಕಾಫಿ ತೋಟ ಮಾಡಲಾ ಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎನ್.ಎಸ್.ಪರಮೇಶ್, ನಿರ್ದೇಶಕರುಗಳಾದ ಎಸ್.ಬಿ.ಭರತ್ ಕುಮಾರ್, ವಿ.ಎನ್.ನಾಗರಾಜ್, ಜಿ.ಪಿ.ಸುನಿಲ್, ಎಚ್.ಎಸ್.ಪುಷ್ಪ, ಸಿ.ಎ.ಮಮತ, ಡಿ.ಪಿ.ಸುಮಿತ್ರ, ಟಿ.ಎಸ್.ವಾಣಿ, ಕೆ.ಜಿ.ದಿನೇಶ್, ಸಿ.ಈ.ವೆಂಕಟೇಶ್, ಜಿ.ಈ.ಸುರೇಶ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಕೆ. ಪೊನ್ನಪ್ಪ ಇದ್ದರು.