ಮಡಿಕೇರಿ, ಸೆ. ೯: ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಾಪೋಕ್ಲು ಶಾಖೆಯಲ್ಲಿ ಕಳೆದ ೩೭ ವರ್ಷಗಳಿಂದ ಹಿರಿಯ ನಗದು ಗುಮಾಸ್ತರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಮ್ಮಣಂಡ ಯು. ಪೂಣಚ್ಚ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಬ್ಯಾಂಕಿನ ಕಚೇರಿ ಸಭಾಂಗಣದಲ್ಲಿ ನಾಪೋಕ್ಲು ಶಾಖಾ ವ್ಯವಸ್ಥಾಪಕ ಧರ್ಮೇಂದ್ರ ಅವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಣಚ್ಚ ಅವರು ಸುದೀರ್ಘ ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿದ್ದು ಖುಷಿ ತಂದಿದೆ. ಒಂದೇ ಕುಟುಂಬದ ಸದಸ್ಯರಂತೆ ನನ್ನೊಂದಿಗೆ ಸಹಕಾರ ನೀಡಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ನಿವೃತ್ತಿ ಆಗಲು ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು.
ಮೇಕೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕಿ ಮಮತಾ, ಚೆಟ್ಟಿಮಾನಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ದೇವಿಚರಣ್, ಕೆನರಾ (ಹೆಚ್.ಎಸ್.ಬಿ.ಸಿ.) ಇನ್ಸೂö್ಯರೆನ್ಸ್ ಕಂಪೆನಿ ಮುಖ್ಯಸ್ಥ ಶಶಾಂಕ್, ಅಮ್ಮಣಂಡ ರತಿ ಪೂಣಚ್ಚ, ಬ್ಯಾಂಕ್ ಸಿಬ್ಬಂದಿಗಳು ಹಾಗೂ ನಾಗರೀಕರು ಉಪಸ್ಥಿತರಿದ್ದರು.