ಕೂಡಿಗೆ ಸೆ, ೯ : ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಹಾಕಿ ಪಂದ್ಯಾಟ ಕೂಡಿಗೆ ಕ್ರೀಡಾ ಶಾಲೆಯ ನೂತನ ಹಾಕಿ ಮೈದಾನದಲ್ಲಿ ಚಾಲನೆ ನೀಡಲಾಯಿತು.
ರಾಜ್ಯಮಟ್ಟದ ೧೭ ವರ್ಷ ವಯೋಮಿತಿಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಗುಲ್ಬರ್ಗ, ಬೆಳಗಾವಿ, ಕೂಡಿಗೆ ಕ್ರೀಡಾ ಶಾಲೆಯು ಸೇರಿದಂತೆ ೫ ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿ ಮೂರು ದಿನಗಳವರೆಗೆ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದರಲ್ಲಿ ವಿಜೇತ ತಂಡವು ರಾಷ್ಟç ಮಟ್ಟದ ಹಾಕಿ ಪಂದ್ಯಕ್ಕೆ ಅಯ್ಕೆಯಾಗಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವ ಎಸ್. ಪಲ್ಲೆದ್ ಮಾಹಿತಿ ನೀಡಿದರು. ರಾಷ್ಟçಮಟ್ಟದ ಪಂದ್ಯಾಟ ಗೋಲಿಯರ್ನಲ್ಲಿ ನಡೆಯಲಿದೆ.
ಪಂದ್ಯಾವಳಿಯ ಉಸ್ತು ವಾರಿಯನ್ನು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸದಾಶಿವ ಎಸ್. ಪಲ್ಲೇದ್ ವಹಿಸಿದ್ದರು.
ತೀರ್ಪುಗಾರರಾಗಿ ಡ್ಯಾನಿ ಈರಪ್ಪ, ಡ್ಯಾನಿ ದೇವಯ್ಯ, ನಾಣಯ್ಯ, ಆದರ್ಶ್, ತಮಯ್ಯ, ಅಯ್ಯಪ್ಪ, ಚಿಣ್ಣಪ್ಪ, ರತೀಶ್, ರಮಾನಂದ, ಪ್ರಮೀಣಾ, ಪಾಲಾಕ್ಷ ಸೇರಿದಂತೆ ಇನ್ನಿತರರು ಇದ್ದರು.