ಮಡಿಕೇರಿ, ಸೆ. ೯: ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಎರಡು ದಿವಸಗಳ ಕಾಲ ವಿವಿಧ ಪೂಜೆ, ತುಳಸಿ ಅರ್ಚನೆ, ಅಭಿಷೇಕ, ಪ್ರವಚನ, ಕೀರ್ತನೆಗಳೊಂದಿಗೆ ಆಚರಿಸಲಾಯಿತು. ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಏರ್ಪಡಿಸಲಾಗಿದ್ದ ಛದ್ಮವೇಷ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಚಿಪುತ್ರದಾಸ್ ಬಹುಮಾನ ವಿತರಿಸಿದರು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಲಾ ಪ್ರಭುಪಾದ ಗುರುಗಳ ಜನ್ಮ ದಿನವನ್ನು ಕೂಡ ಆಚರಣೆ ಮಾಡಲಾಯಿತು.