ಗೋಣಿಕೊಪ್ಪಲು, ಸೆ. ೯: ರಾಷ್ಟಿçÃಯ ಲೋಕ್ ಅದಾಲತ್‌ನ ಮೂಲಕ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಒಟ್ಟು ೬೯೭ ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥಪಡಿಸಲಾಗಿದೆ.

೪೮ ಚೆಕ್ ಅಮಾನ್ಯ ಪ್ರಕರಣ, ೨೯ ಐ.ಪಿ.ಸಿ. ಪ್ರಕರಣ, ೦೬ ಸಿ.ಆರ್.ಎಂ.ಸಿ. ಪ್ರಕರಣ, ೪೫ ಸಿವಿಲ್ ವ್ಯಾಜ್ಯಗಳು ಸೇರಿದಂತೆ ಒಟ್ಟು ೬೯೭ ಪ್ರಕರಣಗಳಂತೆ ಒಟ್ಟು ರೂ. ೧,೬೯,೮೨,೫೪೨ ಮೊತ್ತದ ಪ್ರಕರಣಗಳು ಇತ್ಯರ್ಥಗೊಂಡಿವೆ.

ಕಕ್ಷಿದಾರರ ಸ್ಪಂದನ, ನ್ಯಾಯಾಧೀಶರ ಆಸಕ್ತಿ ಹಾಗೂ ವಕೀಲರ ಸಹಕಾರದೊಂದಿಗೆ ಯಶಸ್ವಿಯಾಗಿ ಅದಾಲತ್ ನಡೆಯಲು ಕಾರಣವಾಯಿತು ಎಂದು ನ್ಯಾಯಾಧೀಶೆ ಕೆ.ಎಸ್. ಆಶಾ ತಿಳಿಸಿದ್ದಾರೆ.