ಅಮೆರಿಕಾ, ಸೆ. ೯: ಅಮೇರಿಕಾದ ನ್ಯೂಯಾರ್ಕ್ನಲ್ಲಿ ನಡೆದ ಯು.ಎಸ್ ಓಪನ್ ಟೆನ್ನಿಸ್ ಪುರುಷರ ಡಬಲ್ಸ್ ಫೈನಲ್ಸ್ನಲ್ಲಿ ಕೊಡಗಿನ ರೋಹನ್ ಬೋಪಣ್ಣ ಹಾಗೂ ಆಸ್ಟೆçÃಲಿಯಾದ ಮ್ಯಾತಿವ್ ಎಬ್ಡನ್ ಜೋಡಿ ಪರಾಭವಗೊಂಡಿತು.
ಅಮೇರಿಕಾದ ರಾಜೀವ್ ರಾಮ್ ಹಾಗೂ ಬ್ರಿಟನ್ನ ಜೋ ಸಾಲಿಸ್ ಬರಿ ಜೋಡಿಯೊಂದಿಗೆ ತಾ.೮ ರಂದು ನಡೆದ ಫೈನಲ್ಸ್ನಲ್ಲಿ ಮೊದಲ ಸೆಟ್ ಅನ್ನು ೬-೩ ಅಂತರದಿAದ ಈ ಜೋಡಿ ಗೆದ್ದರೂ ಬಳಿಕದ ಎರಡು ಸೆಟ್ಗಳಲ್ಲೂ ೩-೬, ೪-೬ ಮೂಲಕ ಸೋತು ಚಾಂಪಿಯನ್ ಪಟ್ಟ ಅಲಂಕರಿಸಲು ವಿಫಲವಾಯಿತು. ಅದಾಗ್ಯು ಬೋಪಣ್ಣ ಅವರು ಗ್ರಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ.