ರಬಾತ್, ಸೆ. ೯: ಉತ್ತರ ಆಫ್ರಿಕಾದ ಮೊರಾಕೊದಲ್ಲಿ ಶುಕ್ರವಾರ ರಾತ್ರಿ ೬.೮ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ಅಂದಾಜಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ.
ಪ್ರಬಲ ಭೂಕಂಪದಿAದಾಗಿ ಮೊರಾಕೊ ಅಕ್ಷರಶಃ ನಲುಗಿದೆ. ಹಲವು ಕಟ್ಟಡಗಳು ಧರೆಗುರುಳಿವೆ. ಮನೆ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಕಟ್ಟಡ ಪಕ್ಕದಲ್ಲಿ ರೈಲು ಹಾದಂತೆ, ಹಲವು ನದಿಗಳ ಕಟ್ಟೆಗಳು ಒಮ್ಮೆಲೆ ಒಡೆದಂತೆ ಹೀಗೆ ಒಬ್ಬೊಬ್ಬರಿಗೆ ಒಂದೊAದು ರೀತಿಯ ಅನುಭವ ವಾಗಿದ್ದು, ಪ್ರಬಲ ಭೂಕಂಪದಿAದ ಜನರು ಭಯಭೀತರಾಗಿದ್ದಾರೆ.
ದೇಶದ ನೈಋತ್ಯ ದಿಕ್ಕಿನಲ್ಲಿರುವ ಪ್ರಮುಖ ಪ್ರವಾಸಿ ತಾಣ ಮಾರಾಕೇಶ್ನಲ್ಲಿ ರಾತ್ರಿ ೧೧.೧೧ಕ್ಕೆ ಸಂಭವಿಸಿದ ಭೂಕಂಪನ, ರಿಕ್ಟರ್ ಮಾಪನದಲ್ಲಿ
(ಮೊದಲ ಪುಟದಿಂದ) ೬.೮ ತೀವ್ರತೆ ಇತ್ತು. ಇದರ ತೀವ್ರತೆಯನ್ನು ತೀರ ಪ್ರದೇಶಗಳಾದ ರಬಾಟ್, ಕಾಸಾಬ್ಲಾಂಕಾ ಹಾಗೂ ಎಸ್ತೂರಿಯಾಗಳೂ ಅನುಭವಿಸಿವೆ.
ಕಟ್ಟಡಗಳು ಚಲಿಸುತ್ತಿರುವಂತೆ ಅನುಭವವಾಯಿತು. ಹೊರಗೆ ಹೋಗಿ ನೋಡಿದಾಗ ಸಾಕಷ್ಟು ಜನ ಜಮಾಯಿಸಿದ್ದರು. ಎಲ್ಲರೂ ಗಾಬರಿ ಹಾಗೂ ಭಯದಿಂದಿದ್ದರು. ಮಕ್ಕಳು ಅಳುತ್ತಿದ್ದವು. ಪಾಲಕರು ಸುರಕ್ಷಿತ ತಾಣಕ್ಕಾಗಿ ಅಲೆದಾಡುತ್ತಿದ್ದರು. ಹೀಗಾದ ಹತ್ತು ನಿಮಿಷಗಳಲ್ಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಫೋನ್ ನೆಟ್ವರ್ಕ್ ಕೂಡಾ ಸ್ತಬ್ಧವಾಯಿತಾದರೂ, ಮರಳಿ ಬಂತು. ಎಲ್ಲರೂ ಹೊರಗೇ ಇರಲು ನಿರ್ಧರಿಸಿದೆವು ಎಂದು ಘಟನೆಯನ್ನು ಅಲ್ಲಿನ ಜನರು ವಿವರಿಸಿದ್ದಾರೆ.
ಮೊರಾಕೊದಲ್ಲಿ ಸಂಭವಿಸಿದ ಭೂಕಂಪನದ ಅನುಭವ ಪಕ್ಕದ ಅಲ್ಲೇರಿಯಾ ಜನರಿಗೂ ಆಗಿದೆ. ಆದರೆ ಅಲ್ಲಿ ಯಾವುದೇ ಜೀವ ಹಾಗೂ ಆಸ್ತಿಪಾಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ ಎಂದು ನಾಗರಿಕ ಸೇನಾ ವಿಭಾಗ ಸ್ಪಷ್ಟಪಡಿಸಿದೆ.
೨೦೦೪ರಲ್ಲಿ ಸಂಭವಿಸಿದ ಭೂಕಂಪದಲ್ಲಿ ೬೨೮ ಜನ ಮೃತಪಟ್ಟಿದ್ದರು. ೯೨೬ ಜನರ ಗಾಯಗೊಂಡಿದ್ದರು. ೧೯೬೦ರಲ್ಲಿ ೬.೭ ತೀವ್ರತೆಯ ಭೂಕಂಪನಕ್ಕೆ ೧೨ ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ೧೯೮೦ರಲ್ಲಿ ಅಲ್ಲೇರಿಯಾದಲ್ಲಿ ೭.೩ ಕಂಪನಾAಕ ತೀವ್ರತೆಯ ಭೂಕಂಪ ಸಂಭವಿಸಿದ್ದು ಈ ಭಾಗದ ಇತಿಹಾಸದಲ್ಲೇ ಅತ್ಯಂತ ಪ್ರಬಲ ಎಂದೆನ್ನಲಾಗಿದೆ. ಆಗ ೨,೫೦೦ ಜನ ಮೃತಪಟ್ಟು ೩ ಲಕ್ಷ ಜನ ಮನೆ ಕಳೆದುಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ನೆರವಿಗೆ ಸಿದ್ಧ - ಮೋದಿ
ಉತ್ತರ ಆಫ್ರಿಕಾದ ಭೂಕಂಪ ಪೀಡಿತ ಮೊರಾಕೊ ದೇಶಕ್ಕೆ ಎಲ್ಲ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಜಿ೨೦ ಶೃಂಗಸಭೆಯಲ್ಲಿ ಮೊರಾಕೊ ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಜಾಗತಿಕ ಸಮುದಾಯವು ಮೊರಾಕೊ ದೇಶದೊಂದಿಗೆ ಇದ್ದು, ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.