ಮಡಿಕೇರಿ, ಸೆ. ೯: ಗೋಣಿಕೊಪ್ಪಲಿನ ಲಯನ್ಸ್ ಪ್ರೌಢ ಶಾಲೆಯಲ್ಲಿ ನಡೆದ ಆಮ್ಮತಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದಾರೆ.

ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯದಲ್ಲಿ ವಿದ್ಯಾರ್ಥಿಗಳಾದ ೧೦ನೇ ತರಗತಿಯ ಆಕರ್ಶ್ ಕೊಂಗAಡ, ಅಯ್ಯಪ್ಪ. ಎಂ. ಜಿ, ತಹಾನ್ ಪೂವಯ್ಯ ಸಿ, ೯ನೇ ತರಗತಿಯ ಅನಲ್. ಪಿ.ಎಸ್, ೮ನೇ ತರಗತಿಯ ವೃಶಾಂಕ್ ದೇವಯ್ಯ ಇವರುಗಳು ಭಾಗವಹಿಸಿ ವಿಜೇತರಾಗಿ ಮುಂಬರುವ ತಾಲೂಕು ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ದೈಹಿಕ ಶಿಕ್ಷಕಿಯರಾದ ಮೋನಿಕಾ ಕಾವೇರಿ ಎಂ.ಪಿ. ಹಾಗೂ ಲಾವಣ್ಯ ನೀಡಿದ್ದಾರೆ.