ಮಡಿಕೇರಿ, ಸೆ. ೯: ಮಂಡ್ಯ ಜಿಲ್ಲೆಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಕೊಡಮಾಡುವ ಪ್ರಶಸ್ತಿಗಳ ಪೈಕಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಜಿಲ್ಲೆಯ ಅಮ್ಮತ್ತಿ-ಹೊಸೂರಿನ ಸಾಹಿತಿ ಪಂದ್ಯAಡ ರೇಣುಕಾ ಸೋಮಯ್ಯ ಅವರು ಕರ್ನಾ ಟಕ ಕಸ್ತೂರಿ ಕಾವ್ಯಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೇಲು ಕೋಟೆಯ ಏಂಗೀಪುರದ ನಂಬೀ ಮಠದ ಇಳೇ ಅಳ್ವಾಸ್ ಸ್ವಾಮೀಜಿ, ಧರ್ಮದರ್ಶಿ ಡಾ. ರಾಜೇಶ್ವರ ಸ್ವಾಮೀಜಿ, ಸಾಹಿತಿ ಡಾ. ರತ್ನಗಿ ಬದಿ, ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು ಮುಂತಾದವರು ಪಾಲ್ಗೊಂಡಿದ್ದರು.