ನವದೆಹಲಿ. ಸೆ. ೯: ಒಂದು ಭೂಮಿ ಒಂದು ಕುಟುಂಬ ಮತ್ತು ನಾವು ಒಂದು ಭವಿಷ್ಯವನ್ನು ಹಂಚಿಕೊಳ್ಳುತ್ತೇವೆ. ‘ವಸುಧೈವ ಕುಟುಂಬಕA' ತತ್ವದ ಅನ್ವಯ ನಾವು ಇತಿಹಾಸದಲ್ಲಿ ನಿರ್ಣಾಯಕ ಕ್ಷಣದಲ್ಲಿ ಭೇಟಿಯಾಗುತ್ತ್ತಿದ್ದೇವೆ ಎಂದು ಪ್ರಧಾನಿ ಮೋದಿ ಘೋಷಿಸಿದರು.

ನವದೆಹಲಿಯಲ್ಲಿಂದು ಜಿ.೨೦ ರಾಷ್ಟçಗಳ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭ ವಿಶ್ವ ಶಾಂತಿಗಾಗಿ ಅವರು ದೆಹಲಿ ಘೋಷಣೆಯನ್ನು ಬಿಡುಗಡೆ ಮಾಡಿದ್ದು ಬಹುತೇಕ ರಾಷ್ಟçಗಳು ಇದನ್ನು ಆಂಗೀಕರಿಸಿದವು.

ನಾವು ಈಗ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜನರ ಮತ್ತು ನಮ್ಮ ಗ್ರಹದ ಭವಿಷ್ಯವನ್ನು ನಿರ್ಧರಿಸುತ್ತದೆ. ನಾವು ಬದ್ಧವಾಗಿರುವ ನಮ್ಮ ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯೊಂದಿಗೆ ಸಾಮರಸ್ಯದಿಂದ ಬದುಕುವ ತತ್ವಶಾಸ್ತçದೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಶಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಆಹಾರ ಮತ್ತು ಇಂಧನ ಸೇರಿದಂತೆ ಸರಕುಗಳ ಬೆಲೆಗಳು ಏರುತ್ತಿದೆ. ಬೆಲೆಗಳು ಜೀವನ ವೆಚ್ಚದ ಒತ್ತಡಕ್ಕೆ ಕಾರಣವಾಗುತ್ತಿದೆ. ಬಡತನದಂತಹ ಜಾಗತಿಕ ಸವಾಲುಗಳು ಮತ್ತು ಅಸಮಾನತೆ, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು ಮತ್ತು ಸಂಘರ್ಷಗಳು ಮಹಿಳೆಯರ ಮೇಲೆ ಅಸಾಮಾನ್ಯÀ ಪರಿಣಾಮ ಬೀರುತ್ತ್ತಿವೆ ಎಂದು ಕಾಳಜಿ ವ್ಯಕ್ತಗೊಳಿಸಿದರು.

ಜಿ- ರಾಷ್ಟçಗಳ ಪಾಲುದಾರಿಕೆಯ ಮೂಲಕ ಇಂತಹ ಜಾಗತಿಕ ಸಮಸ್ಯೆಗಳನ್ನು ನಾವು ಒಟ್ಟಾಗಿ ಎದುರಿಸಬೇಕಾಗಿದೆ ಎಂದರು.

ಪರಿಸರ ನೈರ್ಮಲ್ಯ ರಕ್ಷಣೆಯೊಂದಿಗೆ ಕಡಿಮೆ ಇಂಗಾಲದ ಹೊರಸೂಸುವಿಕೆಯತ್ತ ಗಮನ ಹರಿಸಬೇಕಾಗಿದೆ. ಜೀವವೈವಿಧ್ಯ, ಕಾಡುಗಳು ಮತ್ತು ಸಾಗರಗಳನ್ನು ಸಂರಕ್ಷಿಸಬೇಕಾಗಿದೆ..

ಭವಿಷ್ಯದ ಆರೋಗ್ಯಕ್ಕಾಗಿ ವೈದ್ಯಕೀಯ

(ಮೊದಲ ಪುಟದಿಂದ) ವಲಯದಲ್ಲಿಯೂ ಸುಧಾರಣಾ ಕ್ರಮ ಕೈಗೊಳ್ಳಬೇಕಿದೆ ಎಂದರು. ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಉತ್ಪಾದನಾ ಸಾಮರ್ಥ್ಯಗಳು ಹೆಚ್ಚಲು, ಅಭಿವೃದ್ಧಿಶೀಲ ರಾಷ್ಟçಗಳಲ್ಲಿನ ದುರ್ಬಲತೆ ನೀಗಲು, ಸಾಲಗಳನ್ನು ತೀರಿಸಲು, ಪ್ರಗತಿಯನ್ನು ವೇಗಗೊಳಿಸಲು ಎಲ್ಲಾ ಮೂಲಗಳಿಂದ ಹಣಕಾಸಿನ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ ಎಂದು ಕರೆಯಿತ್ತರು.

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ

ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಯಾಗಬೇಕಿದೆ.. ಪ್ರಾದೇಶಿಕ ಸ್ವಾಧೀನವನ್ನು ಪಡೆಯಲು ಬಲದ ಬಳಕೆ ಮತ್ತು ಯಾವುದೇ ರಾಜ್ಯದ ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ‍್ಯ ಹರಣಕ್ಕೆ ಪರಮಾಣು ಬಳಕೆ ಅಥವಾ ಬೆದರಿಕೆ ಸಲ್ಲದು ಎಂದು ಮುನ್ನೆಚ್ಚರಿಕೆಯಿತ್ತರು. ಉಕ್ರೇನ್‌ನಲ್ಲಿ ವಿರುದ್ಧದ ಯುದ್ಧದಿಂದಾಗಿ ಮಾನವರು ಸಂಕಟಕ್ಕೊಳಗಾಗಿದ್ದಾರೆ ಎಂದು ಅವರು ಖೇದ ವ್ಯಕ್ತಪಡಿಸಿದರು. “ಜಾಗತಿಕ ವಿಶ್ವಾಸ ಕೊರತೆ’ಯನ್ನು ಕೊನೆಗೊಳಿಸುವಂತೆ ಕರೆಯಿತ್ತರು

ರಾಷ್ಟçಗಳ ನಡುವೆ ಸಂಪರ್ಕ ಜಾಲ

ಈ ನಡುವೆ ಅಮೇರಿಕಾ, ಭಾರತ, ಸೌದಿ ಅರೇಬಿಯಾ, ಕೊಲ್ಲಿ ರಾಷ್ಟçಗಳು ಮತ್ತು ಅರಬ್ ರಾಷ್ಟçಗಳನ್ನು ಸಂಪರ್ಕಿಸುವ ರೈಲು ಮತ್ತು ಹಡಗು ಸಂಪರ್ಕ ಜಾಲವನ್ನು ಪ್ರಾರಂಭಿಸುವುದು ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುವ ತೀರ್ಮಾನಗಳನ್ನು ಶನಿವಾರ ನವ ದೆಹಲಿಯಲ್ಲಿ ನಡೆದ ಜಿ೨೦ ಶೃಂಗಸಭೆಯಲ್ಲಿ ಕೈಗೊಳ್ಳಲಾಗಿದೆ. ಸಮಗ್ರ ರೈಲು ಮತ್ತು ಹಡಗು ಸಂಪರ್ಕ ಜಾಲವು ಅಮೇರಿಕಾ, ಭಾರತ, ಸೌದಿ ಅರೇಬಿಯಾ, ಕೊಲ್ಲಿ ರಾಷ್ಟç ಮತ್ತು ಅರಬ್ ದೇಶ ಮತ್ತು ಯುರೋಪಿಯನ್ ಒಕ್ಕೂಟವನ್ನು ಸಂಪರ್ಕಿಸುವ ವ್ಯವಸ್ಥೆಯಾಗಿ ರೂಪುಗೊಳ್ಳಲಿದೆ ಎಂದು ಸಭೆಯಲ್ಲಿ ಒಮ್ಮತದ ಘೋಷಣೆ ಹೊರಬಂದಿತು.

ಆಫ್ರಿಕನ್ ಯೂನಿಯನ್ ಅನ್ನು ಜಿ೨೦ ಯ ಹೊಸ ಖಾಯಂ ಸದಸ್ಯ ದೇಶವಾಗಿ ಸೇರ್ಪಡೆಗೊಳಿಸಲಾಗಿದೆ, ಪ್ರಾದೇಶಿಕ ಸಮಗ್ರತೆ, ಗಡಿ ಪ್ರದೇಶ ಸಮತೆ ಮತ್ತು ಸಾರ್ವಭೌಮತ್ವ, ಅಂತರರಾಷ್ಟಿçÃಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟಿçÃಯ ಕಾನೂನನ್ನು ಎತ್ತಿಹಿಡಿಯಲು ಜಿ ರಾಷ್ಟçಗಳಿಗೆ ದೆಹಲಿ ಘೋಷಣೆಯಲ್ಲಿ ಕರೆ ನೀಡಲಾಗಿದೆ.

ಜಾಗತಿಕ ಜೈವಿಕ ಒಕ್ಕೂಟ

ಶುದ್ಧ ಇಂಧನಗಳ ಬಳಕೆಯನ್ನು ಹೆಚ್ಚಿಸಲು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು. ಸಸ್ಯ ಮತ್ತು ಪ್ರಾಣಿ ತ್ಯಾಜ್ಯ ಸೇರಿದಂತೆ ವಿವಿಧ ಮೂಲಗಳಿಂದ ಪಡೆದ ಜೈವಿಕ ಇಂಧನಗಳ ವ್ಯಾಪಾರವನ್ನು ಸುಗಮಗೊಳಿಸುವ ಮೂಲಕ ಶೂನ್ಯ ಮಾಲಿನ್ಯ ಗುರಿಯನ್ನು ಪೂರೈಸುವ ಜಾಗತಿಕ ಪ್ರಯತ್ನಗಳನ್ನು ಈ ಒಕ್ಕೂಟವು ವೇಗಗೊಳಿಸುತ್ತದೆ ಎಂದು ದೃಢಪಡಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಿಶ್ವದÀ ರಾಷ್ಟçÀಗಳ ನಡುವೆ ಹೆಚ್ಚುತ್ತಿರುವ ನಂಬಿಕೆ ಕೊರತೆಯನ್ನು ಜಿ೨೦ ಸದಸ್ಯ ರಾಷ್ಟçಗಳ ನಡುವೆ ಹೆಚ್ಚಿನ ಸಹಕಾರದಿಂದ ನೀಗಿಸಬೇಕು ಎನ್ನುವ ಕುರಿತು ಸಹಮತಕ್ಕೆ ಬರಲಾಗಿದೆ.

ಭಯೋತ್ಪಾದನೆ ವಿರುದ್ಧ ನಿಲುವು

ಜಗತ್ತು ಎದುರಿಸುತ್ತ್ತಿರುವ ಗಂಭೀರ ಸಮಸ್ಯೆ ಭಯೋತ್ಪಾದನೆಯಾಗಿದೆ. ಯಾವದೇ ರಾಷ್ಟçಗಳು ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸು ನೆರವು ನೀಡದಂತೆ, ರಾಜಕೀಯ ಬೆಂಬಲ ಒದಗಿಸದಂತೆ ಉಗ್ರರÀ ಕಾರ್ಯಾಚರಣೆಗೆ ಕಡಿವಾಣ ಹಾಕುವಂತೆ ಸಭೆ ನಿರ್ಣಯಿಸಿತು.

ಪ್ರಧಾನಿ ಮೋದಿ ಎಲ್ಲ ರಾಷ್ಟçಗಳ ಪ್ರಮುಖರನ್ನು ಸ್ವಾಗತಿಸಿ ದೆÀಹಲಿ ಘೋಷಣೆಯನ್ನು ಮಂಡಿಸಿದರು. ಶೃಂಗ ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇಟೆಲಿಯಿಂದ ಜಾರ್ಜಿಯಾ ಮೆಲೋನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಿಸಿಲ್ವಾ ಮೊದಲಾದವರು ಪಾಲ್ಗೊಂಡಿದ್ದಾರೆ.

ಆದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸಿಲ್ಲ.