ಭಾಗಮಂಡಲ, ಸೆ. ೯ : ಭಾಗಮಂಡಲ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ತಾ. ೧೦ರಂದು (ಇಂದು) ನಡೆಯಲಿದ್ದು ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ . ಸಂಘದ ಚಟುವಟಿಕೆಯನ್ನು ವಿಸ್ತರಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಂಘವನ್ನಾಗಿ ರೂಪಿಸಲು ಹೊಸೂರು ಜೆ .ಸತೀಶ್ ಕುಮಾರ್ ನಾಯಕತ್ವದಲ್ಲಿ ಸದಸ್ಯರ ತಂಡ ಕಣಕ್ಕಿಳಿದಿದೆ. ಹೊಸೂರು ಜೆ. ಸತೀಶ್ ಕುಮಾರ್, ಕೆ.ಸಿ. ಅಶ್ವಥ್ ದೇವಂಗೋಡಿ ಎಂ. ಭಾಸ್ಕರ, ಕೆದಂಬಾಡಿ ಯು. ಮೋಹನ್, ಪಾಣತ್ತಲೆ ಈ. ಲೋಕನಾಥ, ಶಿರಕಜೆ ಎಂ.ಲೋಕ ಪ್ರಕಾಶ್, ಪಡನೋಳನ ಸಿ. ವಿಠಲ ಉಮೇದುವಾರರಾಗಿದ್ದಾರೆ. ಹಿಂದುಳಿದ ವರ್ಗದ ಕ್ಷೇತ್ರದಿಂದ ಅಯ್ಯಣಿರ ಎಂ.ದಿನೇಶ್ ನಾಮಪತ್ರ ಸಲ್ಲಿಸಿದ್ದಾರೆ .ಮಹಿಳಾ ಮೀಸಲು ಕ್ಷೇತ್ರದಿಂದ ಎಸ್. ಎನ್.ಕುಸುಮ ಶಿರಕಜೆ ಕಣಕ್ಕಿಳಿದಿದ್ದಾರೆ.
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಪ್ರಾರಂಭವಾಗಿ ೬೯ ವರ್ಷಗಳಾಗಿವೆ. ಬದಲಾವಣೆ ಬೇಕು ಎಂದು ಹೊಸ ಆಡಳಿತ ಮಂಡಳಿಗೆ ಅವಕಾಶ ಕೊಡಿ ಎಂದು ಕೋರಿರುವ ಮತ್ತೊಂದು ಬಣ.
ಚುನಾವಣೆಯಲ್ಲಿ ಕಣಕ್ಕಿಳಿದಿದೆ. ತಂಡದಲ್ಲಿ ಕೋಡಿ ಯು.ಮೋಟಯ್ಯ, ಕೆ.ಟಿ. ರಮೇಶ್.ಅಮೆ ಮಾದಪ್ಪ, ದೇವಂಗೋಡಿ ಎಸ್. ವೇಗೆಂದ್ರ ಚೆದುಕಾರು ಎಂ.ರವಿ, ಕೆದಂಬಾಡಿ ಎಸ್. ಚೇತನ್ ಬಾರಿಕೆ ನಿರಂಜನ್, ಅಮೆ ಜಿ. ಸರೋಜಾ, ಬಿಲ್ಲವರ ವಿ. ಭೈರಪ್ಪ ಉಮೇದುವಾರರಾಗಿದ್ದಾರೆ.
ಈ ನಡುವೆ ಕೊಡಗು ಜಿಲ್ಲಾ ಪ್ರಗತಿಪರ ಜೇನು ಕೃಷಿಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸುಮಾರು ೪೦ ಮಂದಿ ಸದಸ್ಯರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದು ಅವರಿಗೆ ಮತದಾನದ ಅವಕಾಶ ನೀಡುವಂತೆ ಒಂದು ಬಣ ಕೋರಿತ್ತು. ಮತದಾನದ ಹಕ್ಕು ಕಸಿದಿರುವುದು ಸರಿಯಲ್ಲ ಎಂದಿರುವ ಹೈಕೋರ್ಟ್ ಮತದಾನದಿಂದ ವಂಚಿತರಾದವರಿಗೆ ಮತದಾನದ ಅವಕಾಶ ಕಲ್ಪಿಸಿದೆ. ಈ ಹಿಂದೆ ೨೬ ಸದಸ್ಯರಿಗೆ ಮತದಾನ ಮಾಡಲು ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು ಮತದಾನದಿಂದ ವಂಚಿತರಾದ ಒಟ್ಟು ೬೬ ಮಂದಿಗೆ ಪಾಲ್ಗೊಳ್ಳುವಂತಾಗಿದೆ.