ನಾಪೋಕ್ಲು, ಸೆ. ೯ : ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ, ಸಭಾಂಗಣ ನಿರ್ಮಾಣ ಸೇರಿದಂತೆ ಸಂಘದ ಅಭಿವೃಧಿಗೆ ಸರಕಾರದಿಂದ ಒಂದು ಕೋಟಿ ರೂ.ಗಳ ಅನುದಾನ ದೊರೆತಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಹೇಳಿದರು.

ಸಂಘದ ಸಭಾಂಗಣದಲ್ಲಿ ನಡೆದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾದ ಅನುದಾನ ದೊರೆಯಲು ಆಡಳಿತ ಮಂಡಳಿ ಕಾರಣವಾಗಿದೆ. ª

ಸಂಘವು ೧೭೬೯ ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ೧೪.೩೮ ಲಕ್ಷ ರೂ.ಗಳ ವಾರ್ಷಿಕ ವಹಿವಾಟು ನಡೆಸಿದೆ. ೯೩ ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. ೫ ಕೋಟಿ ರೂ.ಗಳನ್ನು ಠೇವಣಿಯಾಗಿ ಪಡೆದಿದ್ದು, ಸದಸ್ಯರಿಗೆ ೭.೫೫ ಕೋಟಿ ರೂ.ಗಳನ್ನು ಸಾಲವಾಗಿ ನೀಡಲಾಗಿದೆ ಎಂದರು.

ಸAಘವು ಪ್ರಸಕ್ತ ಸಾಲಿನ ವ್ಯಾಪಾರ ವಹಿವಾಟಿನಲ್ಲಿ ೨೦.೦೪ ಲಕ್ಷ ರೂ.ಗಳ ಲಾಭ ಹೊಂದಿದ್ದು, ಸದಸ್ಯರಿಗೆ ಶೇ. ೯ ರ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಸನ್ನು ಅಯ್ಯಪ್ಪ, ಕಲ್ಯಾಟಂಡ ಎಂ. ಬೋಪಣ್ಣ, ನಿಡುಮಂಡ ಸಿ. ಪೂವಯ್ಯ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಪಿ.ಪ್ರಮೀಳಾ, ನಂಬಡಮAಡ ಬಿ. ಸುನಿತಾ. ಎ.ಎನ್. ಲಕ್ಷö್ಮಣ, ಕೋಲೆಯಂಡ ಅಶೋಕ್. ಪಿ.ಟಿ.ಕಾರ್ಯಪ್ಪ, ಕೆ.ಕೆ.ಗಿರೀಶ್, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕ ಅಪ್ಪಯ್ಯ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳಾ, ಸಿಬ್ಬಂದಿ ವರ್ಗ ಇದ್ದರು.