ಗೋಣಿಕೊಪ್ಪಲು, ಸೆ. ೯: ಸಂಘದ ಸದಸ್ಯರ ಹಿತವನ್ನು ಕಾಪಾಡುವುದು ಸಂಘದ ಮೂಲ ಧ್ಯೇಯವಾಗಿದೆ. ಕಳೆದ ೩೫ ವರ್ಷ ಗಳಿಂದ ಸಂಘವು ಪ್ರಗತಿ ಪಥದತ್ತ ಸಾಗುತ್ತಿದೆ. ಸದಸ್ಯರ ಕಷ್ಟ ಸುಖಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಗೋಣಿ ಕೊಪ್ಪ ಅಡಿಕೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ ಹೇಳಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಡಿಕೆ ವರ್ತಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಇವರು ಕಳೆದ ೩೫ ವರ್ಷಗಳ ಹಿಂದೆ ದಿ.ಕಂಜಿತAಡ ಬೆಳ್ಯಪ್ಪನವರ ಪರಿಕಲ್ಪನೆಯಿಂದಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು. ಇಂದಿಗೂ ಕೂಡ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘವು ಯಶಸ್ವಿಯಾಗಿ ಮುಂದುವರೆಯುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸಲುವಾಗಿ ಸಂಘದ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದು ಸಾಧನೆ ಮಾಡಿದವರನ್ನು ಗುರುತಿಸಿ ನಗದು ಪ್ರೋತ್ಸಾಹ ಧನದೊಂದಿಗೆ ಗೌರವಿಸಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ಸಂಘದ ೪ ಸದಸ್ಯರ ಮಕ್ಕಳಿಗೆ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ. ಸಂಘದ ನಿಯಮಗಳಿಗೆ ಸದಸ್ಯರು ಕಠಿಬದ್ದರಾಗಿರಬೇಕೆಂದು ಕಿಲನ್ ಗಣಪತಿ ತಿಳಿಸಿದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕಂಜಿತAಡ ಪೊನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರ ಪಾಲು ಬಂಡವಾಳದಿAದ ಸಂಘವು ಪ್ರಗತಿಯತ್ತ ಸಾಗುತ್ತಿವೆ. ಸದಸ್ಯರ ಸಮಸ್ಯೆಗಳಿಗೆ ಸಂಘವು ಸದಾ ಸ್ಪಂದಿಸುತ್ತದೆ ಎಂದರು. ಕಾರ್ಯಕ್ರಮ ದಲ್ಲಿ ನಿರ್ದೇಶಕರಾದ ನಾಗುವಂಡ ಕೃಪ, ಪಂದ್ಯAಡ ಹರೀಶ್, ಕುಪ್ಪಂಡ ರಾಜು, ಕಾಳಿಮಾಡ ನರೇಂದ್ರ, ಕಡೇಮಾಡ ಲಾಲಾ ಭೀಮಯ್ಯ, ಮುಕ್ಕಾಟೀರ ಶುಭ ಮುತ್ತಪ್ಪ, ಗುಮ್ಮಟ್ಟಿರ ದರ್ಶನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.