ಸುAಟಿಕೊಪ್ಪ, ಸೆ. ೯: ಕುಶಾಲನಗರ ತಾಲೂಕು ಸುಂಟಿ ಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಂದಾಯ ನಿಗದಿ ಆಂದೋಲನ ಕಾರ್ಯಕ್ರಮ ನಡೆಯಿತು. ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ಗೌರಯ್ಯ ಹಾಗೂ ಸರ್ವೆ ವಿಭಾಗದ ಮುಖ್ಯಾಧಿಕಾರಿ ಮಹೇಶ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಿಗೆ ಹಾಗೂ ಹಕ್ಕುದಾರರಿಗೆ ಆಂದೋಲನ ಉದ್ದೇಶವನ್ನು ತಿಳಿಸಲಾಯಿತು.
ಈ ಸಂದರ್ಭ ಸುಂಟಿಕೊಪ್ಪ ಉಪ ತಹಶೀಲ್ದಾರ್ ಶಿವಪ್ಪ, ಸರ್ವೆಯರ್ಗಳಾದ ಶ್ರೀನಿವಾಸ್, ಸಿದ್ದರಾಜು, ಸಹಾಯಕ ಗುರು, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಜಯಂತ್, ನಸೀಮ, ಗ್ರಾಮ ಸಹಾಯಕ ಶಿವಪ್ಪ ಇತರರು ಹಾಜರಿದ್ದರು.