ಕೂಡಿಗೆ, ಸೆ. ೮: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹಾರಂಗಿ ಸಾಕಾನೆ ಶಿಬಿರದ ಅಭಿವೃದ್ಧಿಗೆ ಈ ಸಾಲಿನಲ್ಲಿ ರೂ. ೫೦ ಲಕ್ಷ ಅನುದಾನ ಬಿಡುಗಡೆಗೊಂಡು ವಿವಿಧ ಕಾಮಗಾರಿಗಳು ಶಿಬಿರದಲ್ಲಿ ಆರಂಭಗೊAಡಿವೆ.
ಸಾಕಾನೆ ಶಿಬಿರದ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸಿಗರಿಗೆ ಅನುಕೂಲವಾಗುವ ವಿವಿಧ ಯೋಜನೆ ಮೂಲಕ ವಿವಿಧ ಹಂತದ ಕಾಮಗಾರಿಗಳ ಯೋಜನೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸಾಕಾನೆ ಶಿಬಿರದ ಕೇಂದ್ರದಲ್ಲಿ ಏಳು ಸಾಕಾನೆಗಳಿದ್ದು, ಅವುಗಳ ವೀಕ್ಷಣೆಗೆ ಅನುಕೂಲವಾಗುವ ಕಾಮಗಾರಿಗಳು ಉದ್ಯಾನವನದ ಅಭಿವೃದ್ಧಿ ಪೂರಕವಾದ ವಿವಿಧ ಯೋಜನೆಗಳು ಪ್ರವಾಸಿಗರಿಗೆ ಅನುಕೂಲವಾಗುವಂತೆ ಕ್ಯಾಂಟೀನ್, ಹೈಟೆಕ್ ಶೌಚಾಲಯ ಮತ್ತು ಸಾಕಾನೆ ಮಾವುತರಿಗೆ ಅನುಕೂಲ ಕಲ್ಪಿಸುವ ವಿವಿಧ ಕಟ್ಟಡದ ಕಾಮಗಾರಿಗಳು ಈ ಕೇಂದ್ರದಲ್ಲಿ ನಡೆಯಲಿವೆ.
- ಕೆ.ಕೆ. ನಾಗರಾಜಶೆಟ್ಟಿ.