ಮಡಿಕೇರಿ, ಸೆ. ೮ : ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ತಾ. ೧೦ ರಂದು (ನಾಳೆ) ನಡೆಯಲಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ, ಸಾಧಕರಿಗೆ, ಹಿರಿಯ ಸದಸ್ಯರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪೋತ್ಸಾಹ ಧನ ವಿತರಣೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದು ಹೇಳಿದ್ದಾರೆ.

ಸಂಘವು ಪ್ರಸ್ತುತ ೨೪೨೮ ಸದಸ್ಯರನ್ನು ಹೊಂದಿದ್ದು, ಸುಮಾರು ರೂ.೨೨,೭೫,೨೫೨.೮೪ ಲಾಭ ಗಳಿಸಿದೆ. ರೂ.೨,೮೯,೮೫,೦೯೦ ಪಾಲು ಬಂಡವಾಳವಿದ್ದು, ಒಟ್ಟು ವ್ಯವಹಾರ ರೂ.೩೭,೨೨,೬೪,೫೦೧.೫೦ ಆಗಿದೆ. ಠೇವಣಿ ರೂ.೧೨,೫೪,೨೩,೭೯೫.೮೦ ಇದ್ದು, ಪ್ರಸಕ್ತ ವರ್ಷ ರೂ.೮,೧೩,೨೩,೮೬೭ ಸಾಲ ನೀಡಲಾಗಿದೆ. ಒಟ್ಟು ಸಾಲ ರೂ.೧೪,೬೯,೨೭,೭೫೧ ಆಗಿದ್ದು, ದುಡಿಯುವ ಬಂಡವಾಳ ರೂ.೧೭,೧೫,೭೫,೮೩೫ ಆಗಿದೆ. ರೂ.೮೧,೩೧,೨೫೯ ಕ್ಷೇಮ ನಿಧಿ ಮತ್ತು ರೂ.೮೯,೦೩,೨೭೧.೪೦ ಇತರೆ ನಿಧಿ ಇದೆ ಎಂದು ಚೇತನ್ ಮಾಹಿತಿ ನೀಡಿದ್ದಾರೆ.