ಸಿದ್ದಾಪುರ, ಸೆ. ೮: ಮುಖ್ಯರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಕಾರಿನ ಸಿದ್ದಾಪುರ, ಸೆ. ೮: ಮುಖ್ಯರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಕಾರಿನ ಪಿರಿಯಾಪಟ್ಟಣ ಮಾಲ್ದಾರೆ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದ ಸಂದರ್ಭ ರಾತ್ರಿ ದಾಳಿ ಮಾಡಿದ ಕಾಡಾನೆ ಕಾರನ್ನ ದಂತದಿAದ ತಿವಿದು ಜಖಂಗೊಳಿಸಿದಲ್ಲದೆ , ಪಲ್ಟಿಗೊಳಿಸಲು ಮುಂದಾಗಿದೆ. ಅದೇ ಮಾರ್ಗವಾಗಿ ಮತ್ತೊಂದು ವಾಹನ ಬಂದ ಸಂದರ್ಭದಲ್ಲಿ ಕಾರನ್ನು ಬಿಟ್ಟು ರಸ್ತೆ ಮಾರ್ಗವಾಗಿ ಅರಣ್ಯಕ್ಕೆ ತೆರಳಿದೆ.

ಕಾರಿನಲ್ಲಿದ್ದ ಸಿದ್ದಾಪುರದ ಅನ್ವರ್ ಹಾಗೂ ಅವರ ಮಗ ಅಲ್ಬಾಬ್ ಭಯಭೀತರಾಗಿ ಕಾರಿನಲ್ಲಿ ಕುಳಿತು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆಷ್ಟೆ ಹೊಸ ವ್ಯಾಗನರ್ ಕಾರನ್ನು ಖರೀದಿಸಿದ್ದ ಮಾಲೀಕ ಅನ್ವರ್ ಇದೀಗ ಕಾಡಾನೆ ದಾಳಿಯಿಂದ ಕಾರು ಜಖಂಗೊAಡಿದ್ದು ಒಂದು ಲಕ್ಷದಷ್ಟು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಚೆನ್ನವೀರೇಶ್ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಇತ್ತೀಚೆಗಷ್ಟೇ ಇದೇ ಮಾರ್ಗವಾಗಿ ಬರುತ್ತಿದ್ದ ಎರಡು ಕಾರು ಹಾಗೂ ಬೈಕಿನ ಮೇಲೆ ಕಾಡಾನೆ ದಾಳಿ ಮಾಡಿ ಜಖಂಗೊಳಿಸಿತ್ತು.