ಗ್ರಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ

ಅಮೇರಿಕ, ಸೆ. ೮: ಅಂತರರಾಷ್ಟಿçÃಯ ಟೆನ್ನಿಸ್ ಜಗತ್ತಿನಲ್ಲಿ ಪ್ರತಿಷ್ಠಿತ ಗ್ರಾಂಡ್ ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಪ್ರತಿನಿಧಿಸಿದ ಅತ್ಯಂತ ಹಿರಿಯ (೪೩) ಆಟಗಾರ ಎಂಬ ಖ್ಯಾತಿಗೆ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಪಾತ್ರರಾಗಿದ್ದಾರೆ.

ತಾ.೭ ರಂದು ನಡೆದ ಗ್ರಾಂಡ್ ಸ್ಲಾಮ್ ಯು.ಎಸ್ ಓಪನ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಆಸ್ಟೆçÃಲಿಯಾದ ಎಬ್ಡನ್ ಜೋಡಿ ಫ್ರಾನ್ಸ್ ದೇಶದ ರಾಜೀವ್ ಹಾಗೂ ಹೋಬರ್ಟ್ ಜೋಡಿಯ ವಿರುದ್ಧ ಪುರುಷರ ಡಬಲ್ಸ್ನಲ್ಲಿ ೭-೬, ೬-೨ ಅಂತರದಿAದ ಗೆಲುವು ಸಾಧಿಸಿ ಅಮೇರಿಕಾದ ರಾಜೇವ್ ರಾಮ್ ಹಾಗೂ ಬ್ರಿಟನ್‌ನ ಸಾಲಿಸ್‌ಬರಿ ಜೋಡಿಯೊಂದಿಗೆ ಫೈನಲ್ ಆಡಲು ಪ್ರವೇಶ ಪಡೆದಿದೆ. ಫೈನಲ್ ಪಂದ್ಯವು ತಾ.೮ ರ ತಡರಾತ್ರಿ ಜರುಗಿದೆ.