ಮಡಿಕೇರಿ, ಸೆ. ೮ : ಕ್ರಿಶ್ಚಿಯನ್ ಸಮುದಾಯದ ದೇವತಾಯಿ ಯಾಗಿರುವ ಮೇರಿ ಮಾತೆಯ ಹುಟ್ಟು ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ವಿವಿಧ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಯೊಂದಿಗೆ ಪೂಜೆ ಸಲ್ಲಿಸಲಾಯಿತು.

ಮಡಿಕೇರಿ ಸಂತ ಮೈಕಲರ ದೇವಾಲಯದಲ್ಲಿ ಕ್ರೆöÊಸ್ತ ಸಮುದಾಯ ದವರು ವಿಶೇಷ ಪೂಜೆ ನೆರವೇರಿಸಿ ದರು. ಮೇರಿ ಮಾತೆಯ ಅಲಂಕೃತ ವಿಗ್ರಹದೊಂದಿಗೆ ದೇವಾಲಯದ ಹಿಂಬದಿಯಿAದ ಗಾಂಧಿ ಮೈದಾನ ರಸ್ತೆಗಾಗಿ ಮುಖ್ಯ ರಸ್ತೆಗೆ ಆಗಮಿಸಿ ಜ. ತಿಮ್ಮಯ್ಯ ವೃತ್ತವನ್ನು ಹಾದು ಚರ್ಚ್ಗೆ ಆಗಮಿಸಿ ಆವರಣದ ಲ್ಲಿರಿಸಿದ ಬಳಿಕ ಭಕ್ತರು ಮಾತೆಗೆ ಪುಷ್ಪಾರ್ಚನೆ ಮಾಡಿದರು. ಧರ್ಮ ಕೇಂದ್ರದ ಧರ್ಮಗುರು ರೆ.ಫಾ. ದೀಪಕ್ ನೇತೃತ್ವದಲ್ಲಿ ವಿಶೇಷವಾದ ಆಡಂಬರ ಬಲಿಪೂಜೆ ನೆರವೇರಿಸಿ ಭಕ್ತರಿಗೆ ಹೊಸ ಕದಿರು ವಿತರಣೆ ಮಾಡಲಾಯಿತು. ಕೊಡಗಿನ ಹುತ್ತರಿ ಹಬ್ಬದಂತೆ ಈ ಹಬ್ಬದಂದು ಕ್ರಿಶ್ಚಿಯ ನ್ನರು ಕದಿರು ಮನೆಗೆ ಕೊಂಡೊಯ್ದು ಅದರಿಂದ ಪಾಯಸ ಮಾಡಿ ಸೇವಿಸು ವದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಮಂಗಳೂರು ಕಡೆಯಲ್ಲಿ ಈ ಆಚರಣೆ ಹೆಚ್ಚು ಆಚರಣೆಯಲ್ಲಿದ್ದು, ಅಲ್ಲಿಂದಲೇ ಕದಿರನ್ನು ತರಿಸಿ ವಿತರಣೆ ಮಾಡಲಾ ಯಿತು. ನಂತರ ಭಕ್ತರಿಗೆ ಪಾಯಸ, ಪ್ರಸಾದ ವಿತರಣೆ ಮಾಡಲಾಯಿತು. ಧರ್ಮಗುರುಗಳಾದ ನವೀನ್, ಸಿಬಿ, ಸುನಿಲ್, ಡೆನ್ನಿಸ್, ಅಂತೋಣಿ ಜಾರ್ಜ್ ಇತರರು ಇದ್ದರು.(ಮೊದಲ ಪುಟದಿಂದ)

ಶಾಸಕರು ಭಾಗಿ

ವೀರಾಜಪೇಟೆ : ವೀರಾಜಪೇಟೆಯ ಐತಿಹಾಸಿಕ ಸಂತಅನ್ನಮ್ಮ ದೇವಾಲಯದಲ್ಲಿ ಮೇರಿಮಾತೆ ಅರ್ಥಾತ್ ಸಂತ ಅನ್ನಮ್ಮ ಮಾತೆಯ ಜನ್ಮದಿನಾಚರಣೆಯನ್ನು ಸಡಗರ-ಸಂಭ್ರಮದಿAದ ಆಚರಿಸಲಾಯಿತು.

ಕೊಡಗಿನ ಮೊದಲ ಕ್ರೆöÊಸ್ತ ದೇವಾಲಯವಾದ, ೨೩೦ ವರ್ಷಗಳ ಇತಿಹಾಸ ಹೊಂದಿರುವ ಸಂತ ಅನ್ನಮ್ಮ ಚರ್ಚ್ನಲ್ಲಿ ಮೇರಿ ಹಬ್ಬದ ಪ್ರಯುಕ್ತ ಸಂಭ್ರಮ ಮುಗಿಲು ಮುಟ್ಟಿತ್ತು. ಹಬ್ಬದ ಹಿನ್ನೆಲೆಯಲ್ಲಿ ನವದಿನಗಳ ಪ್ರಾರ್ಥನೆ ಪ್ರತಿದಿನ ಸಂಜೆ ನೆರವೇರಿಸಲಾಯಿತು. ತದನಂತರ ಪುಷ್ಪಾರ್ಚನೆ, ವಿಶೇಷ ಪ್ರಾರ್ಥನೆ ನಡೆಸಲಾಯಿತು. ಹಬ್ಬದ ದಿನ ಬೆಳಿಗ್ಗೆ ಆಡಂಬರದ ಗಾಯನ ಬಲಿ ಪೂಜೆಯೊಂದಿಗೆ ಮೇರಿ ಮಾತೆಯ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಬಲಿಪೂಜೆಯನ್ನು ದೇವಾಲಯದ ಪ್ರಧಾನ ಧರ್ಮಗುರು ರೆ. ಫಾ. ದಯಾನಂದ ಪ್ರಭು ಹಾಗೂ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ನಡೆಸಿಕೊಟ್ಟರು.

ಸಹಾಯಕ ಗುರುಗಳಾದ ಫಾ. ಯೇಸು ಪ್ರಸಾದ್ ಪ್ರಬೋಧನೆ ಬೋಧಿಸಿದರು. ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ದೇವಾಲಯಕ್ಕೆ ಭೇಟಿ ನೀಡಿ ಸಂತ ಅನ್ನಮ್ಮಮಾತೆಗೆ ಪುಷ್ಪ ಅರ್ಪಿಸಿ ಮಾತೆಯ ಆಶೀರ್ವಾದ ಪಡೆದುಕೊಂಡರು.

ತದನAತರ ಚರ್ಚ್ ಆವರಣದಲ್ಲಿರುವ ಮಾತೆ ಮೇರಿಯವರ ಪ್ರತಿಮೆಗೆ ಭಕ್ತರು ಪುಷ್ಪಾಚÀðನೆ ಮಾಡಿ ನಮಿಸಿದರು.

ಭಕ್ತಾದಿಗಳು ಬೆಳಿಗ್ಗೆಯಿಂದಲೇ ಹೊಸಬಟ್ಟೆ ತೊಟ್ಟು, ಕೈತುಂಬಾ ಹೂವು ಹಿಡಿದು ಮೇರಿಮಾತೆಗೆ ಹರಕೆ ಮಾಡಿಕೊಂಡವರು ಸೀರೆಗಳನ್ನು ತೆಗೆದುಕೊಂಡು ಬಂದರು.

ಈ ಸಂದರ್ಭ ಅನ್ನಸಂತರ್ಪಣೆಯನ್ನು ದೇವಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಚರ್ಚ್ನ ವ್ಯಾಪ್ತಿಯಲ್ಲಿ ಬರುವ ೪೦೦ಕ್ಕಿಂತಲೂ ಅಧಿಕ ಕುಟುಂಬದ ಜನರು, ಸಹಸ್ರಾರು ಭಕ್ತಾದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.ಚರ್ಚ್ನ ಧರ್ಮಗುರು ಜಾನ್ ಡಿಕುನ್ನಾ ಅವರ ನೇತೃತ್ವದಲ್ಲಿ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ, ಮೇರಿ ಮಾತೆಯ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿತು. ಇದರೊಂದಿಗೆ ಮಂಗಳೂರಿ ನಿಂದ ತರಲಾಗಿದ್ದ ಹೊಸ ಬೆಳೆಯನ್ನು ಆಶೀರ್ವದಿಸಿ ಭಕ್ತಾದಿಗಳಿಗೆ ಹಂಚಲಾಯಿತು. ಮೇರಿ ಮಾತೆಯ ಹುಟ್ಟು ಹಬ್ಬದ ಸಿಹಿಗಾಗಿ ಕಬ್ಬು ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿ ಕೊಳ್ಳಲಾಯಿತು. ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ತಯಾರಿಸಿ ನೆಂಟರಿಷ್ಟರು, ಸ್ನೇಹಿತರಿಗೆ ಉಣಬಡಿಸಲಾಯಿತು.ಸುಂಟಿಕೊಪ್ಪ : ದಿವ್ಯ ಆಡಂಬರ ಬಲಿಪೂಜೆಯನ್ನು ಮೈಸೂರು ವಲಯ ಶೇಷ್ಠಗುರುಗಳಾದ ರೇ.ಮೆ.ಅಲ್ಫೆರ್ಡ್ ಜಾನ್ ಮೆಂಡೋನ್ಸಾ ಹಾಗೂ ಹಿರಿಯ ಗುರುಗಳಾದ ಡೆನ್ನಿಸ್ ಡಿಸೋಜ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಈ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಮಾತೆ ಮೇರಿ ಅಮ್ಮನವರ ಜನ್ಮದಿನದ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ನಂತರ ದೇವಾಲಯದಿಂದ ಮಾತೆಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ಪುಷ್ಪನಮನ ಸಲ್ಲಿಸಲಾಯಿತು.

ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆಗೆೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು, ಯುವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜÉಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಕ್ರಿಸ್ತರ ತಾಯಿ ಮಾತೆ ಮೇರಿಗೆ ಸಮರ್ಪಿಸುತ್ತಾರೆ.

ಧರ್ಮಗುರುಗಳು ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ ಮೊಂತಿಪೆಸ್ತ್ ಅಂಗವಾಗಿ ನೂತನ ತೆನೆಗಳನ್ನು ಆಶಿರ್ವಚಿಸಿ ವಿತರಿಸಿದರು. ಕ್ರೆöÊಸ್ತ ಬಾಂಧವರು ಮನೆ ಮನೆಗಳಿಂದ ಒಗ್ಗೂಡಿಸಿ ತಂದಿದ್ದ ಬಗೆ ಬಗೆಯ ಪುಷ್ಪಗಳನ್ನು ಎಲ್ಲರೂ ಮಾತೆಗೆ ಸಮರ್ಪಿಸಿ, ನಂತರ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಂಡಗರಕ್ಕೆ ಮುನ್ನುಡಿ ಇಟ್ಟರು.