ಚೆಯ್ಯಂಡಾಣೆ, ಸೆ ೮: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೩-೨೪ ನೇ ಸಾಲಿನ ನರಿಯಂದಡ, ಅರಪಟ್ಟು ಗ್ರಾಮದ (೧)ಹಾಗೂ (೨), ಕರಡ, ಕೊಕೇರಿ, ಚೇಲಾವರ, ಗ್ರಾಮಗಳ ವಾರ್ಡ್ ಸಭೆಗಳು ಆಯಾಯ ವಾರ್ಡ್ನ ಸದಸ್ಯರ ಅಧ್ಯಕ್ಷತೆಯಲ್ಲಿ ತಾ. ೧೧ ತಾ. ೧೩ ವರೆಗೆ ಮತ್ತು ಗ್ರಾಮ ಸಭೆ ತಾ ೧೬ ರಂದು ನಡೆಯಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷೆಯಲ್ಲಿ ಸಭೆ ನಡೆಯಲಿದೆ.
ತಾ. ೧೧ ರಂದು ಪೂರ್ವಾಹ್ನ ೧೧ ಗಂಟೆಗೆ ಮಹಿಳಾ ಸಮಾಜ ಕೊಕೇರಿಯಲ್ಲಿ ಗ್ರಾ.ಪಂ.ಸದಸ್ಯ ಎಚ್.ಎಂ.ರಾಜು ಅಧ್ಯಕ್ಷೆತೆಯಲ್ಲಿ, ಅಪರಾಹ್ನ ೨ ಗಂಟೆಗೆ ಸ.ಕಿ.ಪ್ರಾ. ಶಾಲೆ ಪೊನ್ನೋಲ ಚೇಲಾವರದಲ್ಲಿ ಗ್ರಾ.ಪಂ. ಸದಸ್ಯೆ ಮಂಜುಳಾ ಬಿ. ಎಚ್. ಅಧ್ಯಕ್ಷತೆಯಲ್ಲಿ ತಾ. ೧೨ ರಂದು ಮಂಗಳವಾರ ಪೂರ್ವಾಹ್ನ ೧೧ ಗಂಟೆಗೆ ಸ.ಹಿ.ಪ್ರಾ.ಶಾಲೆ ಕಡಂಗದಲ್ಲಿ ಗ್ರಾ.ಪಂ.ಸದಸ್ಯರಾದ ಸುಬೀರ್ ಸಿ.ಇ. ಅಧ್ಯಕ್ಷತೆಯಲ್ಲಿ, ಅಪರಾಹ್ನ ೧೨ ಗಂಟೆಗೆ ಸ.ಹಿ.ಪ್ರಾ ಶಾಲೆ ಕರಡದಲ್ಲಿ ಗ್ರಾ.ಪಂ ಸದಸ್ಯರಾದ ವಿಲಿನ್ ಬೇಪುಡಿಯಂಡ ಅಧ್ಯಕ್ಷತೆಯಲ್ಲಿ ತಾ. ೧೩ರಂದು ಬುಧವಾರ ಪೂರ್ವಾಹ್ನ ೧೦.೩೦ ಕ್ಕೆ ನರಿಯಂದಡ ಬ್ಲಾಕ್ (೧)ರ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯರಾದ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ, ಅಪರಾಹ್ನ ೩ ಗಂಟೆಗೆ ನರಿಯಂದಡ ಬ್ಲಾಕ್ (೨)ರ ವಾರ್ಡ್ ಸಭೆ ಸ.ಹಿ.ಪ್ರಾ. ಶಾಲೆ ಎಡಪಾಲದಲ್ಲಿ ಗ್ರಾ. ಪಂ.ಸದಸ್ಯ ಕೆ.ಇ. ಮಮ್ಮದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ತಾ. ೧೬ ರಂದು ಶನಿವಾರ ಪೂರ್ವಾಹ್ನ ೧೧ ಗಂಟೆಗೆ ಚೆಯ್ಯ೦ಡಾಣೆ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಲಿದೆ.