ಕುಶಾಲನಗರ, ಸೆ. ೮: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ತೀವ್ರ ಗಾಯಗೊಂಡ ಘಟನೆ ಕುಶಾಲನಗರ ಸಮೀಪದ ಬೈಲುಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕೊಪ್ಪ ಕಡೆಯಿಂದ ಬೈಲುಕೊಪ್ಪ ಕಡೆಗೆ ಬೈಕ್ (ಕೆಎ೦೯-ಹೆಚ್ಎಂ ೭೪೩೪) ಮೈಸೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಮಾರುತಿ ಓಮಿನಿ ವ್ಯಾನ್ಗೆ (ಕೆಎ೪೫-೦೨೭೦೩) ಡಿಕ್ಕಿಯಾಗಿ ಬೈಕ್ ಸವಾರರು ರಸ್ತೆಗೆ ಬಿದ್ದು ತಲೆಗೆ ತೀವ್ರ ಏಟು ಉಂಟಾಗಿದೆ. ಅಪಘಾತದ ಸಂದರ್ಭ ಕಾರು ರಸ್ತೆಯಲ್ಲಿ ಮಗುಚಿಕೊಂಡಿದೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದ ಯುವಕ ಗಾಡ್ವಿನ್ (೨೪) ಎಂಬಾತ ತನ್ನ ಸ್ನೇಹಿತ ಕೊಪ್ಪ ಗ್ರಾಮದ ನಿವಾಸಿ ಸುಪ್ರೀತ್ (೧೯) ಜೊತೆಗೆ ಬೈಲುಕೊಪ್ಪೆ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ತೀವ್ರ ಗಾಯಗೊಂಡ ಇಬ್ಬರು ಯುವಕರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ ಎಂದು ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.