ಸೋಮವಾರಪೇಟೆ, ಸೆ. ೮: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸಮೀಪದ ಹಾನಗಲ್ಲು ಗ್ರಾಮದ ಅಂಗನವಾಡಿಗೆ ಶ್ರೀಕೃಷ್ಣ ಹಾಗೂ ರಾಧೆಯರು ಆಗಮಿಸಿದರು. ದಿನನಿತ್ಯ ಬಣ್ಣ ಬಣ್ಣದ ಬಟ್ಟೆಗಳಿಂದ ಕಂಗೊಳಿಸುತ್ತಿದ್ದ ಪುಟಾಣಿಗಳು ದಿನದ ವಿಶೇಷತೆ ಯೆಂಬAತೆ ಶ್ರೀಕೃಷ್ಣ ಹಾಗೂ ರಾಧೆಯರಂತೆ ಆಗಮಿಸಿದ್ದನ್ನು ಕಂಡ ಅಂಗನವಾಡಿಯ ಶಿಕ್ಷಕಿ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡಿ ತಾವೂ ಸಂಭ್ರಮಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆ ಸಮೀಪದ ಹಾನಗಲ್ಲು ಅಂಗನವಾಡಿಯ ಶಿಕ್ಷಕಿ ಶಾರದ ಪುರುಷೋತ್ತಮ್ ಅವರು, ಹಿಂದಿನ ದಿನವೇ ಮಕ್ಕಳ ಪೋಷಕರಿಗೆ ದಿನದ ಮಹತ್ವವನ್ನು ತಿಳಿಸಿದ್ದರು. ಅದರಂತೆ ಮನೆಯಿಂದ ಅಂಗನವಾಡಿಗೆ ಆಗಮಿಸಿದ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯರಾಗಿದ್ದರು.

ಛದ್ಮವೇಷ ಸ್ಪರ್ಧೆಯಂತೆ ಮೇಲ್ನೋಟಕ್ಕೆ ಕಂಡರೂ ಮಕ್ಕಳು ಮುದ್ದು ಕೃಷ್ಣ-ರಾಧೆಯಂತಾಗಿದ್ದರು. ಎಲ್ಲರಿಗೂ ಬಹುಮಾನದ ಬದಲಿಗೆ ಉಡುಗೊರೆಯನ್ನು ಶಿಕ್ಷಕಿ ಶಾರದಾ ಅವರು ನೀಡಿದರು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಮಿತ್ರ ಮತ್ತು ಸದಸ್ಯರುಗಳು, ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತೆ ಶಾರದ ಪುರುಷೋತ್ತಮ್, ಪೋಷಕರಾದ ಅಯ್ಯಪ್ಪ, ಪ್ರವೀಣ್ ಉಪಸ್ಥಿತರಿದ್ದರು.

ಬಿಜಿಎಸ್ ಶಾಲೆ: ಸಮೀಪದ ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಾಧೆಕೃಷ್ಣರ ವೇಷಧಾರಿಗಳಾಗಿ ಆಗಮಿಸಿದ್ದರು. ದಿನದ ಮಹತ್ವದ ಕುರಿತು ಉಪನ್ಯಾಸಕರಾದ ಚಂದ್ರಹಾಸ ಭಟ್ ಅವರು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಸೇರಿದಂತೆ ಪೋಷಕರು, ಶಿಕ್ಷಕರು ಇದ್ದರು.