ಪೊನ್ನಂಪೇಟೆ, ಸೆ.೬ : ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ.೮೮.೩೭ ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೭೭.೯೪ ಲಕ್ಷ ಕ್ರೋಢೀಕೃತ ವ್ಯಾಪಾರ ಲಾಭ ಹಾಗೂ ರೂ.೨೮.೩೭ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ಮಾಹಿತಿ ನೀಡಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸಂಘದ ವಾರ್ಷಿಕ ವರದಿ ನೀಡಿದರು. ಸಂಘದ ೩೧೧೧ ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿರುವುದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಈ ಬಾರಿ ಶೇ.೧೫ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
ಸದಸ್ಯರ ಪಾಲು ಹಣ ರೂ. ೧೧೪.೨೯ ಲಕ್ಷ, ಸಂಘದ ಕ್ಷೇಮನಿಧಿ ರೂ.೧೩೨.೮೯ ಲಕ್ಷ, ಇತರ ಠೇವಣಾತಿ ಮತ್ತು ನಿಧಿಗಳು ಸೇರಿ ರೂ.೫೩೬.೭೧ ಲಕ್ಷ, ದುಡಿಯುವ ಬಂಡವಾಳ ೧೧೧೭.೯೨ ಲಕ್ಷ, ಇತರೆ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ಧನವಿನಿಯೋಗಗಳು ಸೇರಿ ರೂ.೧೪೬.೩೨ ಲಕ್ಷ, ಸಂಘದ ಚರ ಸ್ಥಿರಾಸ್ತಿ ಮೌಲ್ಯ ರೂ.೩೯೦.೭೪ ಲಕ್ಷಗಳಾಗಿರುತ್ತದೆ ಎಂದು ತಿಳಿಸಿದರು.
೧೯೩೦ ರಲ್ಲಿ ಪೊನ್ನಂಪೇಟೆ ನಾಡು ಕ್ರಾಪ್ ಲೋನ್ ಸೇಲ್ ಮತ್ತು ಸಪ್ಲೆöÊ ಲಿ. ಎಂಬ ನಾಮಕರಣದಿಂದ ಪ್ರಾರಂಭವಾದ ಸಂಘವು, ೧೯೫೮ ರಲ್ಲಿ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಎಂದು ಹೆಸರು ನೊಂದಾಯಿಸಿಕೊAಡು, ತನ್ನ ಕಾರ್ಯಕ್ಷೇತ್ರವನ್ನು ಪೊನ್ನಂಪೇಟೆ ನಾಡಿನ ೧೫ ಗ್ರಾಮಗಳು ಮತ್ತು ಶ್ರೀಮಂಗಲ ನಾಡಿನ ೬ ಗ್ರಾಮಗಳು ಒಳಗೊಂಡAತೆ ಒಟ್ಟು ೨೧ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಘವು ರೈತ ಸದಸ್ಯರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ಅವಶ್ಯಕ ವಸ್ತುಗಳಾದ ಸಿಮೆಂಟ್, ಹತ್ಯಾರು, ಬಟ್ಟೆ, ಮುಳ್ಳು ತಂತಿ, ಆರ್. ಸಿ. ಸಿ. ಮೋರಿ, ಪೈಪ್, ಗೃಹ ಬಳಕೆ ವಸ್ತುಗಳು, ಕೋವಿ, ಕೋವಿ ತೋಟ ಅಲ್ಲದೆ ಸರ್ಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಕರಾಗಿ ಹಾಗೂ ಆರ್.ಟಿ.ಸಿ ವಿತರಿಸುವ ಕಾರ್ಯನಿರ್ವಹಿಸುತ್ತಿದ್ದು, ರೈತರ ಅನುಕೂಲಕ್ಕಾಗಿ ಪ್ರತಿ ಗಂಟೆಗೆ ೧.೫ ಟನ್ನು ಸಾಮರ್ಥ್ಯದ ಬಿನ್ನಿ ಅಕ್ಕಿಗಿರಣಿ ಹೊಂದಿರುತ್ತದೆ. ಸಂಘವು ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಚಿಲ್ಲರೆ ಮಾರಾಟದ ಪೆಟ್ರೋಲ್ ಬಂಕ್ ಹೊಂದಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ. ರೈತರ ಹುಟ್ಟುವಳಿಗಳಾದ ಭತ್ತ, ಕಾಫಿ ಮತ್ತು ಕಾಳು ಮೆಣಸು ದಾಸ್ತಾನು ಇಡಲು ಸುಸಜ್ಜಿತವಾದ ಗೋದಾಮು ಸೌಲಭ್ಯ ಹೊಂದಿದ್ದು, ರೈತ ಸದಸ್ಯರ ಹುಟ್ಟುವಳಿಯ ಆಧಾರದ ಮೇಲೆ ಈಡಿನ ಸಾಲ ಕೊಡುವ ವ್ಯವಸ್ಥೆ ಇದ್ದು, ರೈತ ಸದಸ್ಯರ ಅನುಕೂಲಕ್ಕಾಗಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಕಾಫಿ ಗಿರಣಿ (ಹಲ್ಲಿಂಗ್ ) ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘವು ಸತತವಾಗಿ ‘ಎ' ತರಗತಿ ಆಡಿಟ್ ವರ್ಗೀಕರಣದಲ್ಲಿ ಮುಂದುವರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಸಂಘದ ಸದಸ್ಯರುಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ಆಡಳಿತ ಮಂಡಳಿ ನಡೆಸಿದೆ ಎಂದು ಹೇಳಿದರು. ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟಂಬರ್ ೮ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಸಂಧರ್ಭ ಉಪಾಧ್ಯಕ್ಷ ಪದಾರ್ಥಿ ಎಸ್.ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ.ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಐನಂಡ ಕೆ.ಬೋಪಣ್ಣ, ಮಾಚಂಗಡ ಬಿ.ಮೊಣ್ಣಪ್ಪ, ಬೊಟ್ಟಂಗಡ ಎಸ್.ದಶಮಿ ದೇಚಮ್ಮ, ಮೂಕಳೇರ ಪಿ.ಶಾರದ, ಬಿ.ಎಸ್.ಚಂದ್ರಶೇಖರ್, ಪುತ್ತಾಮನೆ ದೇವದಾಸ್ ಜೀವನ್, ಹೆಚ್.ಹೆಚ್.ತಮ್ಮಯ್ಯ, ಹಾಲುಮತದ ಎಂ.ಡಿಕ್ಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ.ಪೂನA ಹಾಜರಿದ್ದರು. -ಚನ್ನನಾಯಕ