ಮಡಿಕೇರಿ, ಸೆ.೬: ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ನಗರದ ಸಂತ ಜೋಸೆಫರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿಸ್ಟರ್ ರೋಜಾ ಕರೆ ನೀಡಿದರು.

ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡ ‘ಫಿಸಿಕ್ಸ್ ಫೆಸ್ಟ್’ ಅನ್ನು ಸಿಸ್ಟರ್ ರೋಜಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಭೌತಶಾಸ್ತçದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಫಿಸಿಕ್ಸ್ ಫೆಸ್ಟ್ ಸಹಕಾರಿ ಎಂದು ಅಭಿಪ್ರಾಯಪಟ್ಟರು. ವಿದ್ಯಾ ಸಂಸ್ಥೆಯ ಸಂಚಾಲಕಿ ಸಿಸ್ಟರ್ ಲೂರ್ದ್ ಮೇರಿ, ಸಿಸ್ಟರ್ ರೆಜಿನಾ ಮಿರಾಂಡ, ಸಿಸ್ಟರ್ ಫಿಲೋಮಿನಾ, ಮೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಾಲತಿ ವೇದಿಕೆಯಲ್ಲಿದ್ದರು.

ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಭೌತಶಾಸ್ತç ಉಪನ್ಯಾಸಕಿ ಚೈತ್ರ ಎಂ.ಸಿ. ಮಾರ್ಗದರ್ಶನದಲ್ಲಿ ನ್ಯೂಕ್ಲಿಯರ್ ಸ್ಪೋಟ್ ಡಿಮ್ -ಡಿಪ್ ಲೈಟ್ ಸೆನ್ಸರ್, ಸ್ಪೇಸ್ ಶೆಟಲ್, ಎಲೆಕ್ಟೊçà ಮ್ಯಾಗ್ನೆಟಿಕ್ ಕ್ರೇನ್. ಮೊದಲಾದ ಆಕರ್ಷಕ ಮಾಡೆಲ್‌ಗಳನ್ನು ತಯಾರಿಸಿದ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ೨೦ತಂಡಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದರು. ಸಂಸ್ಥೆಯ ಹಿರಿಯ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗವನ್ನೂ ಒಳಗೊಂಡAತೆ ಎಲ್ಲ ಮಕ್ಕಳೂ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿದರು.

ಮೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತç ಉಪನ್ಯಾಸಕಿ ಮಾಲತಿ, ಸಂತ ಜೋಸೆಫರ ಪ್ರೌಢಶಾಲಾ ಶಿಕ್ಷಕಿಯರಾದ ಗ್ರೇಸಿ ಲೋಬೋ, ಶಾರದಾ ಹಾಗೂ ರಮಿತ ತೀರ್ಪುಗಾರರಾಗಿದ್ದರು. ವಿದ್ಯಾರ್ಥಿ ಹಬೀಬುಲ್ ಬಷರ್ ನಿರೂಪಿಸಿದರು.