ವೀರಾಜಪೇಟೆ, ಸೆ. ೬: ಮಲಯಾಳಂ ಸಂಸ್ಕೃತಿಯನ್ನು ಬಿಂಬಿಸುವ ಓಣಂ ಆಚರಣೆಯನ್ನು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ವೀರಾಜಪೇಟೆ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವೀರಾಜಪೇಟೆ ವತಿಯಿಂದ ನಗರದ ಮೀನುಪೇಟೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಶ್ರೀ ಮುತ್ತಪ್ಪನ್ ಕಲಾ ಮಂಟಪದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಓಣಂ ಆಚರಣಾ ಸಮಿತಿಯ ಕಾರ್ಯದರ್ಶಿಗಳಾದ ಸಿ.ಆರ್. ಬಾಬು ಅವರು ಓಣಂ ಆಚರಣಾ ಸಮಿತಿಯು ೧೪ ವರ್ಷಗಳಿಂದ ಹಲವು ಧಾರ್ಮಿಕ ಮತ್ತು ಸಮಾಜಿಕ ಕಾರ್ಯಕ್ರಮಗಳೋಂದಿಗೆ ಓಣಂ ಆಚರಣೆಯನ್ನು ಮಾಡಿಕೊಂಡು ಬಂದಿದೆ. ಇದೀಗ ೧೪ ವರ್ಷ ಪೂರೈಸಿ ೧೫ ನೇ ವರ್ಷದ ಅಚರಣೆಯನ್ನು ಮಾಡಲಾಗುತ್ತಿದೆ. ತಾ ೧೭ ರ ಭಾನುವಾರ ಓಣಂ ಹಬ್ಬದ ಆಚರಣೆಯನ್ನು ವಿಜ್ರಂಭಣೆಯಿAದ ಆಚರಿಸಲಾಗುತ್ತಿದೆ.

ಅಂದು ಬೆಳಿಗೆ ೮.೩೦ ಕ್ಕೆ ಮಹಾಬಲಿಯನ್ನು ಬರಮಾಡಿಕೊಂಡು ಶ್ರೀ ಮುತ್ತಪ್ಪನ್ ದೇವಾಲಯದ ಸನ್ನಿದಿಯಲ್ಲಿ ದೀಪ ಬೆಳಗಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಶ್ರೀ ಮುತ್ತಪ್ಪ ದೇವಾಲಯದಿಂದ ಸಂಸ್ಕೃತಿಯನ್ನು ಬಿಂಬಿಸುವ ಸಿಂಗಾರಿ ಮೇಳಂ, ಕೇರಳ ಚೆಂಡೆ ಮದ್ದಳೆ,ಕಥಕಳಿ ನೃತ್ಯದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆದು ದೇವಾಲಯಕ್ಕೆ ಹಿಂದುರುಗುವುದು. ಮಧ್ಯಾಹ್ನ ಕೇರಳದ ವಿಶೇಷ ಖಾದ್ಯಗಳಿಂದ ತಯಾರಿಸಲಾದ ವಿಶೇಷ ಭೊಜನ (ಓಣಂ ಸದ್ಯ) ನಡೆಯಲಿದೆ. ಓಣಂ ಆಚರಣೆಯ ಅಂಗವಾಗಿ ತಾ. ೧೬ ರಂದು ವೀರಾಜಪೇಟೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗಾಗಿ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೇ ನಡೆಯಲಿದೆ. ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಾಕ್ರಮದಲ್ಲಿ ಭಾಗವಹಿಸುವವರು ತಾ. ೧೦ ರ ಒಳಗಾಗಿ ಹೆಸರನ್ನು ನೊಂದಾಯಿಸುವುದು ಕಡ್ಡಾಯವಾಗಿದೆ. ಎಂದು ಮಾಹಿತಿ ನೀಡಿದರು.

ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು ಮಾತನಾಡಿ ಓಣಂ ಅಚರಣೆಯ ಅಂಗವಾಗಿ ಮದ್ಯಾಹ್ನ ೨ಗಂಟೆಗೆ ಕೊಡಗು ಮೈಸೂರು ಸಂಸದರಾದ ಪ್ರತಾಪ್ ಸಿಂಹ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್, ಸಿ.ಕೆ. ಭಾಗ್ಯಲಕ್ಷಿö್ಮ, ಪೂಜಾ ರವೀಂದ್ರನ್, ಕೊಡಗು ಜಿಲ್ಲೆ ಮಲಯಾಳಿ ಸಮಾಜದ ಸ್ಥಾಪಕ ಅದ್ಯಕ್ಷ ಕೆ.ಎಸ್. ರಮೇಶ್, ಜಿಲ್ಲಾಧ್ಯಕ್ಷ ವಿ.ಎಂ. ವಿಜಯನ್, ಉಪಧ್ಯಕ್ಷ ಟಿ.ಕೆ.ಸುಧೀರ್, ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಕೆ.ಕೆ. ಸುರೇಶ್ ಬಾಬು, ವಿ.ವಿ. ಅರುಣ್ ಕುಮಾರ್ ಮತ್ತು ಬಾಬು ಅವರು ಉಪಸ್ಥಿತರಿರುತ್ತಾರೆ. ನಂತರ ತಿರುವಾದಿರ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಎಂದು ಮಾಹಿತಿ ನೀಡಿದರು.

ಹೆಚ್ಚಿನ ವಿವರಗಳಿಗೆ ಸುಮೇಶ್ ಪಿ.ಜಿ ೯೪೪೮೩೦೮೨೬೦, ಸಿ.ಆರ್.ಬಾಬು ೯೭೩೧೨೫೮೧೯೭, ಸಿ.ಆರ್. ಸಜೀವನ್ ೯೪೪೮೭೨೧೧೧೮ ಮತ್ತು ಟಿ.ಆರ್. ಗಣೇಶ್ ೯೮೮೦೮೮೦೯೪೭ ಗಳನ್ನು ಸಂಪರ್ಕಿಸುವAತೆ ಅಡಳಿತ ಮಂಡಳಿಯ ಸದಸ್ಯರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಓಣಂ ಆಚರಣಾ ಸಮಿತಿಯ ಉಪಧ್ಯಕ್ಷರಾದ ಸಿ.ಆರ್. ಸಜೀವನ್, ಸಹ ಕಾರ್ಯದರ್ಶಿ ಪಿ.ಜಿ. ರಂಜಿತ್, ಕೋಶಾಧಿಕಾರಿ ಟಿ.ಆರ್.ಗಣೇಶ್, ಸದಸ್ಯರಾದ ಕೆ.ಎನ್. ಉಪೇಂದ್ರ ಮತ್ತು ಸುರೇಶ್ ಅವರು ಹಾಜರಿದ್ದರು.