ಮಡಿಕೇರಿ, ಸೆ. ೬: ಮಹಿಳೆ ಯೋರ್ವರು ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ನಾಪತ್ತೆ ಯಾಗಿರುವ ಕುರಿತು ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿಯ ಭಗವತಿ ನಗರದ ನಿವಾಸಿ ಜಯಸ್ಮಿತ ಮಕ್ಕಳೊಂದಿಗೆ ಸಂಬAಧಿಕರ ಮದುವೆಗೆಂದು ತೆರಳಿದವರು ಮತ್ತೆ ಮನೆಗೆ ಹಿಂತಿರುಗಿಲ್ಲ ಎಂದು ಅವರ ಪತಿ ಕೆ.ಯು. ರವಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ (೨೨೮೭೨೫) ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ (೨೨೯೦೦೦) ಮಾಹಿತಿ ನೀಡಲು ಪ್ರಕಟಣೆ ಕೋರಿದೆ.