ಸೋಮವಾರಪೇಟೆ, ಸೆ. ೬ : ೨೦೨೩-೨೪ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಎಸ್ಜೆಎಎಂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಸಮಗ್ರ ಪ್ರಶಸ್ತಿ ಪಡೆದರು.
ಕಬಡ್ಡಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಖೋ ಖೋ ಬಾಲಕರ ವಿಭಾಗದಲ್ಲಿ(ಪ್ರ), ಬಾಲಕಿಯರ ವಿಭಾಗದಲ್ಲಿ(ದ್ವಿ), ಥ್ರೋಬಾಲ್ ಬಾಲಕಿಯರ ವಿಭಾಗದಲ್ಲಿ(ಪ್ರ), ಹಾಕಿಯಲ್ಲಿ ಬಾಲಕಿಯರು(ಪ್ರ) ಸ್ಥಾನ ಗಳಿಸಿದರು.
ಅಥ್ಲೆಟಿಕ್ಸ್ನ ರಿಲೇ ಬಾಲಕರ ವಿಭಾಗದಲ್ಲಿ (ಪ್ರ) ಸ್ಥಾನ ಗಳಿಸಿದರು. ಎತ್ತರ ಜಿಗಿತ ಪಾಲಾಕ್ಷ (ಪ್ರ), ೨೦೦ ಮೀಟರ್ ಓಟದಲ್ಲಿ (ದ್ವಿ), ೩೦೦೦ ಮೀಟರ್ ಓಟದಲ್ಲಿ ಅಂಕಿತ್(ದ್ವಿ), ೨೦೦ ಮೀಟರ್ ಓಟದಲ್ಲಿ ಹೇಮಂತ್ (ಪ್ರ), ಉದ್ದ ಜಿಗಿತ(ತೃ), ೨೦೦ ಮೀಟರ್ ಓಟ ಬಾಲಕಿಯರ ವಿಭಾಗದಲ್ಲಿ ಚಿತ್ರ(ತೃ), ಬಾಲಕರ ೮೦೦ ಮೀಟರ್ನಲ್ಲಿ ಪಾಲಾಕ್ಷ(ದ್ವಿ), ಬಾಲಕಿಯರ ವಿಭಾಗದಲ್ಲಿ ಸಿಂಚನ(ಪ್ರ), ೪೦೦ ಮೀಟರ್ ಸ್ಪರ್ಧೆ ಯಲ್ಲಿ ಜೀವಿತ(ತೃ) ಸ್ಥಾನಗಳಿಸಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹೆಚ್ಚಿನ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಶಾಲೆಗೆ ವೀರಾಗ್ರಹಣಿ ಪ್ರಶಸ್ತಿಯನ್ನು ನೀಡಲಾಯಿತು.
ಜ್ಞಾನವಿಕಾಸ ಶಾಲೆ: ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದ ಕ್ರೀಡೆಗಳಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೇಬಲ್ ಟೆನ್ನಿಸ್ನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದರು. ಖೋ ಖೋ ಬಾಲಕರು ಮತ್ತು ಬಾಲಕಿಯರು (ದ್ವಿ), ಕಬಡ್ಡಿ ಬಾಲಕರು ಮತ್ತು ಬಾಲಕಿಯರು(ದ್ವಿ), ಶೆಟಲ್ ಬ್ಯಾಡ್ಮಿಂಟನ್ ಬಾಲಕರು(ದ್ವಿ), ಬ್ಯಾಸ್ಕೆಟ್ ಬಾಲ್ ಬಾಲಕರು (ದ್ವಿ) ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್(ದ್ವಿ) ಹಾಗೂ ೩೦೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಸುಪ್ರಿತ್ ತೃತೀಯ ಸ್ಥಾನಗಳಿಸಿದರು. ಮುಖ್ಯ ಶಿಕ್ಷಕಿ ಲಕ್ಷಿö್ಮÃ ಇದ್ದರು.