ವಿರಾಜಪೇಟೆ, ಸೆ. ೬: ಒಂದೇ ಧರ್ಮ ಒಂದೇ ಜಾತಿ ಒಂದೇ ದೇವರು ಎಂದು ಪ್ರತಿಪಾದಿಸಿದ ಶ್ರೀ ನಾರಾಯಣ ಗುರು ಶೋಷಿತ ಸಮೂದಾಯದ ಆದರ್ಶ ಗುರು, ಸಮಾನತೆಯನ್ನು ಜಗತ್ತಿಗೆ ಸಾರಿದ ಸಂತ ಎಂದು ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಅವರು ಶಾಖೆಯ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಹೇಳಿದರು.

ಎಸ್.ಎನ್.ಡಿ.ಪಿ ವೀರಾಜಪೇಟೆ ಶಾಖೆಯ ವತಿಯಿಂದ ನಗರದ ಮೀನುಪೇಟೆ ಮುತ್ತಪ್ಪ ದೇವಾಲಯದ ಶ್ರೀ ಮುತ್ತಪ್ಪನ್ ಕಲಾ ಮಂಟಪದ ಸಭಾಂಗಣದಲ್ಲಿ ಸಾಮಾಜಿಕ ಕಳಕಳಿಯ ಸಂತ ಎಂದು ಪ್ರಖ್ಯಾತಿ ಪಡೆದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ನಡೆಯಿತು. ಅಂದಿನ ಕಾಲಘಟ್ಟದಲ್ಲಿ ಹೋರಾಟದ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಿದ ಗುರುಗಳು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದಾರೆ. ಅವರ ಜೀವನ ಸಿದ್ದಾಂತ ತತ್ವಗಳನ್ನು ಮೈಗೂಡಿಸಿಕೊಂಡು ಮುನ್ನಡೆದಿದ್ದಲ್ಲಿ ಸುಖಿ ಸಮಾಜ ನಿರ್ಮಾಣವಾಗುತ್ತದೆ. ಸಂಘಟನೆಯಲ್ಲಿ ಬಲವಿದೆ. ಸಂಘಟನೆಯ ಬಲವರ್ಧನೆಗೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಎಂದು ಹೇಳಿದರು.

ಎಸ್.ಎನ್.ಡಿ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದÀ ಅವರು ಮಾತನಾಡಿ ಶ್ರೀ ನಾರಾಯಣ ಗುರು ಅವರುಗಳ ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಮತ್ತು ಕಾರ್ಯಕ್ರಮಗಳನ್ನು ಮೆಚ್ಚಿ ಜಿಲ್ಲೆಯಲ್ಲಿ ಸುಮಾರು ೫೦ ಕ್ಕೂ ಅಧಿಕ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ವ್ಯಕ್ತಿಯಿಂದ ಮಾಡಲಾಗದ ಕೆಲಸ ಸಂಘಟನೆಯಿAದ ಮಾಡಲು ಸಾಧ್ಯ, ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಸಂಘಟನೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಉತ್ತಮ ಸಮಾಜ ರೂಪಿಸುವಲ್ಲಿ ಮುಂದಾಗುವAತೆ ಕರೆ ನೀಡಿದರು.

ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷರಾದ ಬಿ.ಎಂ. ಗಣೇಶ್ ಅವರು ಮಾತನಾಡಿ ಶ್ರೀ ನಾರಾಯಣ ಗುರು ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂದು ಪ್ರತಿಪಾದಿಸಿದರು. ಆದರೇ ನಾವುಗಳು ಜಾತಿ ಜಾತಿಗಳ ಮಧ್ಯೆ ಧರ್ಮ ಮಧ್ಯೆ ಮನುಷ್ಯರ ಮಧ್ಯೆ ಸಮಾನ ಭಾವಕ್ಯತೆ ಎಂಬುದು ಕಣ್ಮರೆಯಾಗಿ ಗುರುಗಳ ತತ್ವದ ಹಾದಿಯನ್ನು ಮರೆತಿದ್ದೇವೆ ಎಂದು ವಿಷಾದಿಸಿದರು. ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಅಧ್ಯಕ್ಷÀ ಟಿ.ಎ. ನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ, ಪದವಿ ಪೂರ್ವ ಮತ್ತು ಪದವಿ ಪರೀಕ್ಷೆಗಳಲ್ಲಿ ಅತ್ಯುನ್ನತ್ತ ಅಂಕಗಳಿAದ ತೇರ್ಗಡೆಗೊಂಡ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಮತ್ತು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಗೈದ ಸಮಾಜ ಸೇವಕರಾದ ವಿನೋದ್ ತರ್ಮಲ್, ಶ್ರೀ ಮುತ್ತಪ್ಪನ್ ದೇವಾಲಯದ ಅಧ್ಯಕ್ಷರಾದ ಟಿ.ಕೆ.ರಾಜನ್, ಪುರಸಭೆಯ ಸದಸ್ಯರಾದ ಸಿ.ಕೆ. ಪ್ರಥ್ವಿನಾಥ್ ಮತ್ತು ಓಣಂ ಆಚರಣಾ ಸಮಿತಿಯ ಅಧ್ಯಕ್ಷರಾದ ಪಿ.ಜಿ. ಸುಮೇಶ್ ಅವರುಗಳನ್ನು ಶಾಖೆಯ ವತಿಯಿಂದ ಗೌರವಾದರಗಳಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ೧೫ ಮಂದಿ ವಿಧ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ವೀರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ, ಉಪಾಧ್ಯಕ್ಷ ಟಿ.ಆರ್. ಗಣೇಶ್, ಉಪಸ್ಥಿತರಿದ್ದರು. ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಕಾರ್ಯದರ್ಶಿಗಳಾದ ಪದ್ಮನಾಭ ಅವರು ಸರ್ವರನ್ನು ಸ್ವಾಗತಿಸಿ, ನಿರೂಪಿಸಿದರು. ಶಾಖೆಯ ಉಪಾಧ್ಯಕ್ಷರಾದ ಟಿ.ಆರ್. ಗಣೇಶ್ ವಂದಿಸಿದರು.

ಜಿಲ್ಲಾ ಯೂನಿಯನ್ ನ ಕೌನ್ಸಿಲರ್ ಆರ್. ಗಿರೀಶ್, ಪಂಚಾಯಿತಿ ಸದಸ್ಯರಾದ ದಾಮೋದರನ್ ಪೆಗ್ಗರಿಕಾಡು, ಎಸ್.ಎನ್.ಡಿ.ಪಿ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ವೀರಾಜಪೇಟೆ ಶಾಖೆಯ ಪದಾಧಿಕಾರಿಗಳು ಸದಸ್ಯರು ವಿವಿಧ ಶಾಖೆಯ ಸದಸ್ಯರು ಸಮುದಾಯ ಭಾಂದವರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.