ಸೋಮವಾರಪೇಟೆ, ಸೆ. ೬ : ಇಲ್ಲಿನ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಅವರ ಒಂದು ವರ್ಷದ ಶೈಕ್ಷಣಿಕ ಶುಲ್ಕವನ್ನು ಹಿರಿಯ ವಕೀಲರಾದ ಎಚ್.ಸಿ. ನಾಗೇಶ್ ಅವರ ಪತ್ನಿ ಲತಾ ಭರಿಸಿದ್ದು, ಅದರ ಚೆಕ್‌ನ್ನು ಶಾಲೆಯ ಮುಖ್ಯ ಶಿಕ್ಷಕಿ ಲಕ್ಷಿö್ಮÃ ಅವರಿಗೆ ಹಸ್ತಾಂತರಿಸಿದರು. ಲತಾ ನಾಗೇಶ್ ಅವರು ಹಿಂದಿನ ಸಾಲಿನಲ್ಲೂ ವಿದ್ಯಾರ್ಥಿನಿಯ ಶಾಲಾ ಶುಲ್ಕ, ಸಮವಸ್ತç ಹಾಗೂ ಪುಸ್ತಕಗಳಿಗೆ ಹಣ ನೀಡಿದ್ದರು.