ಕುಶಾಲನಗರ, ಸೆ. ೫ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಮರಳಿದ ಸೈನಿಕನನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕುಶಾಲನಗರ ಗಡಿಭಾಗದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ದೆಹಲಿಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ ಎಸ್.ಎನ್. ಗಣೇಶ್ ಮೂಲತಃ ಕೂಡಿಗೆ ಸೀಗೆಹೊಸೂರು ನಿವಾಸಿಯಾಗಿದ್ದು ಒಟ್ಟು ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಕುಶಾಲನಗರ -ಕೊಪ್ಪ ಗಡಿಭಾಗದ ಕಾವೇರಿ ವೃತ್ತ ಬಳಿ ಯೋಧನನ್ನು ಬರಮಾಡಿಕೊಂಡ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನಂತರ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.