ನಾಪೋಕ್ಲು, ಸೆ. ೫: ಪೋಷಕರ ಸಹಕಾರವಿದ್ದರೆ ಮಾತ್ರ ಮಕ್ಕಳು ಕ್ರೀಡೆಯಲ್ಲಿ ಮುಂದೆ ಬಂದು ಉನ್ನತಿಯನ್ನು ಹೊಂದಲು ಸಾಧ್ಯ ಎಂದು ಹಿರಿಯ ಕ್ರೀಡಾಪಟು ಅರೆಯಡ ಗಣೇಶ್ ಬೆಳ್ಯಪ್ಪ ಹೇಳಿದರು. ಇಲ್ಲಿನ ಭಗವತಿ ಯುವಕ ಸಂಘದ ವತಿಯಿಂದ ಸರ್ಕಾರಿ ಪ್ರಾಥ ಮಿಕ ಶಾಲೆಯ ಆಟದ ಮೈದಾನದಲ್ಲಿ ಕೈಲ್ ಮುಹೂರ್ತ ಹಬ್ಬದ ಕ್ರೀಡಾ ಕೂಟದ ಸಮಾರಂಭದಲ್ಲಿ ಅತಿಥಿಗ ಳಾಗಿ ಪಾಲ್ಗೊಂಡು ಅವರು ಮಾತ ನಾಡಿದರು. ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಬಹುಮಾನ ಸಿಗುವುದಿಲ್ಲ. ಆದರೆ ನಿರಂತರ ಕ್ರೀಡೆಗಳಲ್ಲಿ ಪಾಲ್ಗೊ ಳ್ಳುವಿಕೆ ಮುಖ್ಯ ಎಂದ ಅವರು ಇಂತಹ ಕ್ರೀಡಾಕೂಟದಿಂದ ಗ್ರಾಮೀಣ ಮಕ್ಕಳ ಪ್ರತಿಭೆ ಹೊರ ಬರಲು ಸಾಧ್ಯ ಎಂದರು.

ನಿವೃತ್ತ ಉದ್ಯೋಗಿ ನಾಟೋಳಂಡ ರಮೇಶ್ ಭೀಮಯ್ಯ ಮಾತನಾಡಿ, ಮಾನಸಿಕವಾಗಿ, ಶಾರೀರಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತ ನಾಡಿ, ಶಾಲೆಯ ಆಟದ ಮೈದಾನ ದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಹಲವು ಕ್ರೀಡಾಪಟುಗಳು ಹೊರ ಹೊಮ್ಮಿದ್ದಾರೆ. ಎಲ್ಲರೂ ಒಗ್ಗೂಡಲು ಕ್ರೀಡೆ ಸಹಕಾರಿ ಎಂದರು.

ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ರಾಜ್ಯ ಬ್ಯಾಂಕ್ ಉದ್ಯೋಗಿ ಬೊಪ್ಪೆರ ಜಯ ಉತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಆರ್.ಎಂ.ಸಿ ಮಾಜಿ ಅಧ್ಯಕ್ಷ ವೇದಿಕೆಯಲ್ಲಿ ನಿವೃತ್ತ ರಾಜ್ಯ ಬ್ಯಾಂಕ್ ಉದ್ಯೋಗಿ ಬೊಪ್ಪೆರ ಜಯ ಉತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಆರ್.ಎಂ.ಸಿ ಮಾಜಿ ಅಧ್ಯಕ್ಷ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ವಿಜು ಪೂವಯ್ಯ, ಶಿವಚಾಳಿಯಂಡ ಸುಭಾಷ್ ನಾಣಯ್ಯ, ಭಗವತಿ ಸಂಘದ ಕಾರ್ಯದರ್ಶಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ ಉಪಸ್ಥಿತರಿದ್ದರು. ಕ್ರೀಡಾಕೂಟದ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಕೇಲೇಟಿರ ದೇಚಮ್ಮ ಪ್ರಾರ್ಥನೆಗೈದರು. ಕಂಗಾAಡ ಜಾಲಿ ಪೂವಪ್ಪ ನಿರೂಪಿಸಿ ಅಜ್ಜೇಟಿರ ವಿಕ್ರಂ ವಂದಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾ ನಗಳನ್ನು ವಿತರಿಸಿದರು.