ಮಡಿಕೇರಿ, ಸೆ. ೫ : ಕೊಡವ ನ್ಯಾಷನಲ್ ಕೌನ್ಸಿಲ್ನ ಬಹುಕಾಲದ ಬೇಡಿಕೆಯಾಗಿರುವ ಕೊಡವರಿಗೆ ಒದಗಬೇಕಾದ ಭೂ ರಾಜಕೀಯ ಸ್ವಾಯತ್ತತೆ ಸಂಬAಧ ಆಯೋಗವೊಂದನ್ನು ರಚಿಸುವ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಅಕ್ಟೋಬರ್ ೪ ಕ್ಕೆ ಮುಂದೂಡಲಾಗಿದೆ. ಆಯೋಗ ರಚನೆ ಸಂಬAಧ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ ಹಾಗೂ ಖ್ಯಾತ ಅರ್ಥ ಶಾಸ್ತçಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಈ ಹಿಂದೆಯೇ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕಳೆದ ಬಾರಿ ವಿಚಾರಣೆ ಸಂದರ್ಭ ಸ್ವಾಮಿ ಅವರು ಖುದ್ದಾಗಿ ವಾದ ಮಂಡಿಸಿದ್ದರು. ಈ ಬಾರಿ ನವದೆಹಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಸ್ವಾಮಿ ಅವರು ಭಾಗಿಯಾದರು. ಅರ್ಜಿಯ ಪ್ರತಿವಾದಿಗಳಾದ ಕೇಂದ್ರ ಗೃಹ ಹಾಗೂ ಕಾನೂನು ಮಂತ್ರಾಲಯ ಹಾಗೂ ರಾಜ್ಯ ಸರಕಾರದ ಪರ ವಕೀಲರು ಅರ್ಜಿಯ ಕುರಿತು ಆಕ್ಷೇಪಣೆಗೆ ಸಮಯ ಬಯಸಿದ ಕಾರಣ ಅಕ್ಟೋಬರ್ ೪ ರಂದು ವಿಚಾರಣೆಯನ್ನು ಮುಂದೂಡುವAತೆ ಚೀಫ್ ಜಸ್ಟಿಸ್ ಪ್ರಸನ್ನ ಬಿ ವರಾಲೆ ಹಾಗೂ ಜಸ್ಟೀಸ್ ಕೃಶ ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿದೆ. ಅರ್ಜಿದಾರರ ಪರ ಕೀರನ್ ನರೇನ್ ಅವರು ಹಾಜರಿದ್ದರು.